
ಮೈಸೂರು
ಡಿ.30-ಜ.1 :48 ಗಂಟೆಗಳ ಸಂಗೀತ ಕಾರ್ಯಕ್ರಮ
ಸ್ವರಮಹಾಯಾಗ ಟ್ರಸ್ಟ್ ಸಂಸ್ಥೆಯ ಸಹಾಯಾರ್ಥವಾಗಿ ಜಗತ್ತಿನಲ್ಲಿ ಮೊದಲ ಬಾರಿಗೆ ನಿರಂತರ 48 ಗಂಟೆ ಗುರುಮಹಾಯಾಗ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತದೆ ಎಂದು ಪಂ.ಪ್ರಸನ್ನ ಮಾಧವ ಗುಡಿ ಹೇಳಿದರು.
ಮೈಸೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ, ಗಾಯಕರು ತಮ್ಮ ನಿರಂತರ ಗಾಯನದ ಮೂಲಕ ಹೊಸ ಇತಿಹಾಸ ಸೃಷ್ಠಿ ಮಾಡಲಿದ್ದಾರೆ ಎಂದರು. ಈ ಹಿಂದೆ 2008 ರಲ್ಲಿ 26 ಗಂಟೆ 12 ನಿಮಿಷಗಳ ಕಾಲ ಹಾಡಿ ದಾಖಲೆ ನಿರ್ಮಿಸಿದ್ದಾರೆ. ಡಿ.30 ರಂದು ಬೆಳಿಗ್ಗೆ 9 ಗಂಟೆಯಿಂದ ಜನವರಿ 1 ರ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ಏಲಾನ್ ಕನ್ವೆನ್ಷನ್ ಸೆಂಟರ್, ಜೆ.ಪಿ.ನಗರ 7 ನೇ ಹಂತ, ಬ್ರಿಗೇಡ್ ಅಪಾರ್ಟ್ಮೆಂಟ್ ಎದುರು, ಪುಟ್ಟೇನಹಳ್ಳಿ ರಸ್ತೆ ಇಲ್ಲಿ ಗುರುಮಹಾಯಾಗ ಸಂಗೀತ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಿದರು.
3 ಗಂಟೆ ಅವಧಿಯ ಕಾರ್ಯಕ್ರಮಕ್ಕೆ 5000 ರೂ. ನೀಡಬೇಕು. ಮುಂಗಡ ಸೀಟು ಕಾದಿರಿಸಿಕೊಳ್ಳಲು ಮೊ.ಸಂ.9481309709/ 9108279709 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.