ಕರ್ನಾಟಕ

ಕುಂಜಿಲದಲ್ಲಿ ನಗದು ದೋಚಿದ ಮೂವರು ಚೋರರ ಬಂಧನ

ರಾಜ್ಯ(ಮಡಿಕೇರಿ) ಮಾ.13 :- ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಿಲ ಗ್ರಾಮದ ನಿವಾಸಿ ಅಬ್ದುಲ್ ರಜಾಕ್ ಎಂಬುವವರ ಮನೆಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂಜಿಲ ಗ್ರಾಮದ ನಿವಾಸಿಗಳಾದ ಹರ್ಷದ್(17), ಟಿ.ಹೆಚ್.ಶಾಹೀರ್(19) ಹಾಗೂ ಅಮೀರ್ ಸೊಹೈಲ್ ಬಂಧಿತ ಆರೋಪಿಗಳು.

ಮಾ.3 ರಂದು ಸೌದಿ ಅರೇಬಿಯಾದಿಂದ ಕುಂಜಿಲದ ತಮ್ಮ ನಿವಾಸಕ್ಕೆ  ಬಂದ ಅಬ್ದುಲ್ ರಜಾಕ್ ಅವರು, ತಮ್ಮಲ್ಲಿದ್ದ ಭಾರತದ 2 ಸಾವಿರ ರೂ. ಮುಖಬೆಲೆಯ 25 ನೋಟುಗಳು ಹಾಗೂ ಸೌದಿ ಅರೇಬಿಯಾದ 6 ಸಾವಿರ ರಿಯಾಲ್ ಸೇರಿದಂತೆ ಒಟ್ಟು 1.50 ಲಕ್ಷ ರೂ. ನಗದು ಹಣವನ್ನು ಬೀರುವಿನಲ್ಲಿ ಇಟ್ಟಿದ್ದರು. ಮಾರ್ಚ್ 4 ರಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮನೆಗೆ ಮರಳಿ ಬೀರುವಿನಲ್ಲಿ ನೋಡಿದಾಗ ಹಣ ಕಳುವಾಗಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಅಬ್ದುಲ್ ರಜಾಕ್ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಆದೇಶದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಡಿವೈಎಸ್‍ಪಿ ಸುಂದರ ರಾಜ್ ಅವರ ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್, ನಾಪೋಕ್ಲು ಠಾಣಾಧಿಕಾರಿ ನಂಜುಂಡ ಸ್ವಾಮಿ, ಸಿಬ್ಬಂದಿಗಳಾದ ಫ್ರಾನ್ಸಿಸ್, ನವೀನ್ ಕುಮಾರ್, ಮಹೇಶ್, ರವಿ, ಮಂಜುನಾಥ, ಕಾಳಿಯಪ್ಪ, ಚಾಲಕರುಗಳಾದ ಸುನಿಲ್ ಹಾಗೂ ಬಷೀರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: