ಸುದ್ದಿ ಸಂಕ್ಷಿಪ್ತ

ಮಾ.24ಕ್ಕೆ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ, ಥ್ರೋಬಾಲ್ ಕ್ರೀಡಾಕೂಟ

ಸೋಮವಾರಪೇಟೆ,ಮಾ.13-ಸಮೀಪದ ಯಡೂರು ಗ್ರಾಮದಲ್ಲಿ ಉದಯ ಯುವಕ ಸಂಘ, ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷ್‍ನ್ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಮಾ.24 ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಹಾಗೂ ಥ್ರೋಬಾಲ್ ಕ್ರೀಡಾಕೂಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎ.ಎಂ. ಹರ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಬಡ್ಡಿ ಪಂದ್ಯಕ್ಕೆ ಪ್ರಥಮ ಬಹುಮಾನ 15 ಸಾವಿರ ರೂ. ನಗದು, ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 4 ಸಾವಿರ ರೂ. ಹಾಗೂ ನಾಲ್ಕನೇ ಬಹುಮಾನವಾಗಿ 2 ಸಾವಿರ ರೂ. ನಗದು ಹಾಗೂ ಎಲ್ಲಾ ವಿಭಾಗಕ್ಕೂ ಆಕರ್ಷಕ ಟ್ರೋಫಿ ನೀಡಲಾಗುವುದು. ಥ್ರೋಬಾಲ್ ಪಂದ್ಯಾಟಕ್ಕೆ ಪ್ರಥಮ ಬಹುಮಾನ  6 ಸಾವಿರ ರೂ. ನಗದು, ದ್ವಿತೀಯ ಬಹುಮಾನ 3 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ಭಾಗವಹಿಸುವ ತಂಡಗಳು ಮಾ.24ರಂದು ಬೆಳಿಗ್ಗೆ 9 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9483914505 ಸಂಪರ್ಕಿಸಬಹುದು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: