ಕರ್ನಾಟಕ

ಮಂಡ್ಯದಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಡ್ಯ (ಮಾ.14): ನೆಹರು ಯುವ ಕೇಂದ್ರ, ಕಾವೇರಿ ಸ್ತ್ರೀ ಶಕ್ತಿ ಜಿಲ್ಲಾ ಒಕ್ಕೂಟ, ಚಾಮುಂಡೇಶ್ವರಿ ಸ್ತ್ರೀ ಶಕ್ತಿ ಸಂಘ, ಅಶೋಕನಗರ, ಜಾಗೃತಿ ಯುವತಿ ಮತ್ತು ಮಹಿಳಾ ಮಂಡಳಿ ಗುತ್ತಲು, ಸಂಭ್ರಮ ಮಹಿಳಾ ಮಂಡಳಿ ಜಿಲ್ಲಾ ಮಹಿಳಾ ವಿವಿಧ್ದೋದ್ದೇಶ ಸಹಕಾರ ಸಂಘ, ಕಾವೇರಿ ಅಭ್ಯುದಯ ಪ್ರತಿಷ್ಠಾನ ಟ್ರಸ್ಟ್ ಮಂಡ್ಯ ಇವರ ಸಹಯೋಗದಲ್ಲಿ ಮಾರ್ಚ್ 14 ರಂದು ಮಧ್ಯಾಹ್ನ 2 ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ನೆರೆಹೊರೆ ಯುವ ಸಂಸತ್ತು ಜಿಲ್ಲಾ ಸಮಾವೇಶ, ಹಾಗೂ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ (ಸ್ವೀಪ್) ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಂಡ್ಯ ಬಾಲಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮಾರಂಭದ ಉದ್ಘಾಟನೆಯನ್ನು ಮಂಡ್ಯ ಜಿಲ್ಲಾ ಪಂಚಾಯತ್‍ನ ಪ್ರಭಾರ ಅಧ್ಯಕ್ಷರಾದ ಪಿ.ಕೆ.ಗಾಯತ್ರಿ ರೇವಣ್ಣ ನೆರವೇರಿಸಲಿದ್ದು, ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಗಳಾದ ಮೀರಾ ಶಿವಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಂಡ್ಯ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: