ಮೈಸೂರು

ಚಾಮುಂಡೇಶ್ವರಿ ವಿಧಾಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗಾಗಿ ಪೈಪೋಟಿ

ಮೈಸೂರು,ಮಾ.14:- ಮಾರ್ಚ್ 25 ಕ್ಕೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರವೆಂದೇ ಗುರುತಿಸಿಕೊಂಡ ಚಾಮುಂಡೇಶ್ವರಿ ವಿಧಾಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದ್ದು, ಬಿಜೆಪಿ ಟಿಕೇಟ್ ಗಾಗಿ ಪೈಪೋಟಿ ನಡೆಯುತ್ತಿದೆ.

ಆಕಾಂಕ್ಷಿಗಳ ಪಟ್ಟಿ ಹರಿಕೆಯ ಕುರಿ ಆಗಲು ಸಿದ್ಧವಾಗುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗಿಟ್ಟಿಸಲು ಐವರಿಂದ ಭಾರೀ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಅರುಣ್ ಕುಮಾರ್ ಗೌಡ, ಗೋಪಾಲರಾವ್, ಅಪ್ಪಣ್ಣ, ಮಾರ್ಬಳ್ಳಿ ಮೂರ್ತಿ, ಮತ್ತು ಜಗದೀಶ್ ಗೌಡರಿಂದ ಟಿಕೇಟ್ ಗಾಗಿ ಅಲೆದಾಟ ಆರಂಭವಾಗಿದೆ. ಈ ಐವರಲ್ಲಿ ಯಾರೇ ನಿಂತರೂ ಜೆಡಿಎಸ್ ಗೆ ತೆರೆಮರೆಯಲ್ಲಿ ಬೆಂಬಲ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಟಿಕೇಟ್ ಗಾಗಿ ಭಾರೀ ಪೈಟ್ ನಡೆಯುತ್ತಿದೆ. ಐವರಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ ಎಸ್ ಯಡಿಯೂರಪ್ಪ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದ್ದು, ಮೈಸೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಮೈಸೂರಿಗೆ ಟಿಕೇಟ್ ಆಕಾಂಕ್ಷಿಗಳು ಅಲೆದಾಡುತ್ತಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: