ಮೈಸೂರು

ದಿ.16,17ರಂದು ‘ಮೈಸೂರು ಒಡೆಯರುಗಳ ಆಳ್ವಿಕೆಯಲ್ಲಿ ನೀರಾವರಿ ಯೋಜನೆಗಳ ಪರಂಪರೆ’ ವಿಚಾರಸಂಕಿರಣ

ಮೈಸೂರು, ಮಾ.14 : ವಿದ್ಯಾವರ್ಧಕ ಕಾಲೇಜಿನಿಂದ ‘ಮೈಸೂರು ಒಡೆಯರುಗಳ ಆಳ್ವಿಕೆಯಲ್ಲಿ ನೀರಾವರಿ ಯೋಜನೆಗಳ ಪರಂಪರೆ’ ವಿಷಯವಾಗಿ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು .ಆಯೋಜಿಸಿದೆ.

ಇತಿಹಾಸ ವಿಭಾಗ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಮಾ.16, 17ರಂದು ಕಾಲೇಜಿನಲ್ಲಿ ಆಯೋಜಿಸಿರುವ ವಿಚಾರ ಸಂಕಿರಣವನ್ನು ಬೆಳಗ್ಗೆ 9.30ಕ್ಕೆ ಶಾಸಕ ವಾಸು ಅವರು ಚಾಲನೆ ನೀಡುವರು, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸುವರು, ಕರಾಮುವಿವಿಯ ಡಾ.ಎನ್.ಸುಶೀಲ ಅರಸ್ ಅವರಿಂದ ದಿಕ್ಸೂಚಿ ಭಾಷಣ, ಮುಖ್ಯ ಅತಿಥಿಗಳಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಡಾ.ಟಿ.ವೆಂಕಟೇಶ್, ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಎಸ್.ಎನ್.ಲಕ್ಷ್ಮೀನಾರಾಯಣ ಮೊದಲಾದವರು ಪಾಲ್ಗೊಳ್ಳುವರು ಎಂದು ಪ್ರಾಂಶುಪಾಲ ಡಾ.ಎಸ್.ಮರೀಗೌಡ ಬುಧವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಗವಿಸಿದ್ಧಯ್ಯ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗುವ ಮೊದಲ ಗೋಷ್ಠಿಯಲ್ಲಿ ನೀರಾವರಿ ಯೋಜನೆಗಳಿಗೆ ಮೈಸೂರು ಸಂಸ್ಥಾನದ ಪ್ರಾರಂಭಿಕ ಒಡೆಯರ್ ಗಳ ಕೊಡುಗೆಗಳು ವಿಷಯವಾಗಿ ಮೈವಿವಿಯ ಇತಿಹಾಸ ವಿಭಾಗದ ಡಾ.ಸಿ.ಗುರುಸಿದ್ಧಯ್ಯ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದ ನೀರಾವರಿ ಯೋಜನೆಗಳು ವಿಷಯವಾಗಿ ಟಿ.ನರಸೀಪುರದ ವಿಜಯ ಕಾಲೇಜಿನ ಡಾ.ಲ.ನ.ಸ್ವಾಮಿ, 10ನೇ ಚಾಮರಾಜ ಒಡೆಯರ್ ಕಾಲದ ನೀರಾವರಿ ವ್ಯವಸ್ಥೆ ಬಗ್ಗೆ ಜೆಎಸ್ಎಸ್ ಮಹಿಳಾ ಕಾಲೇಜಿನ ಡಾ.ಎಸ್.ನರೇಂದ್ರ ಪ್ರಸಾದ್ ಇವರುಗಳು ಉಪನ್ಯಾಸ ನೀಡುವರು.

ಮಾ.17ರಂದು ನಡೆಯುವ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರು ಮೈಸೂರು ಸಂಸ್ಥಾನದ ನೀರಾವರಿ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾಣಿಕೆ ಹಾಗೂ ಜಯಚಾಮರಾಜ ಒಡೆಯರ್ ಕಾಲದ ನೀರಾವರಿ ಅಭಿವೃದ್ಧಿಗಳು ವಿಷಯವಾಗಿ ಹಂಪಿ ಕನ್ನಡ ವಿವಿಯ ಡಾ.ಚಿನ್ನಸ್ವಾಮಿ ಸೋಸಲೆ ಅವರುಗಳು ವಿಷಯ ಮಂಡಿಸುವರು ಎಂದು ತಿಳಿಸಿದರು.

ಸಂಜೆ 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲ ಮಠಪತಿ ವಿದ್ಯಾವರ್ಧಕ ಸಂಸ್ಥೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವಿಚಾರ ಸಂಕಿರಣದ ಕಾರ್ಯದರ್ಶಿ ಪ್ರೊ.ಕೆ.ಎಸ್.ಸವಿತಾ,ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಗವಿಸಿದ್ಧಯ್ಯ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: