ಮೈಸೂರು

ಮಾ.16ರಂದು ‘ಜೀವಜಲ ಸಂಗಮೋತ್ಸವ’ ಪ್ರಶಸ್ತಿ ಪ್ರದಾನ ಹಾಗೂ ಮಹಿಳಾ ದಿನಾಚರಣೆ : ಸಾಧಕರ ಸನ್ಮಾನ

ಮೈಸೂರು,ಮಾ.14 : ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ, ಮಹರ್ಷಿ ಜನಸೇವಾ ಟ್ರಸ್ಟ್ ಮತ್ತು ಕ್ರೆಡಿಟ್ ಐ ಸಂಸ್ಥೇ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಆದರ್ಶ ನಾರಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜೀವಜಲ ಸಂಗಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ರಾಷ್ಟ್ರೀಯ ಜಲಸಂಗಮಕ್ಕಾಗಿ ಹಕ್ಕೊತ್ತಾಯ ಸಮಿತಿ ಪ್ರಧಾನ ಸಂಚಾಲಕಿ ಹೆಚ್.ಎಲ್.ಯಮುನಾ ತಿಳಿಸಿದರು.

ಮಾ.16ರ ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಗಂಗ-ಕಾವೇರಿ ನದಿ ಜೋಡಣೆ ಸಹಿ ಸಂಗ್ರಹದಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಕಾರ್ಯಾನುಷ್ಠಾನ ಭಗೀರಥರಿಗೆ ‘ಜೀವಜಲ ಸಂಗಮೋತ್ಸವ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಂಕರ ವಿಲಾಸ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ವಿದ್ವಾನ್ ಶ್ರೀನಿವಾಸಮೂರ್ತಿ ಉದ್ಘಾಟಿಸುವರು. ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ.ಟಿ.ಎಸ್.ಕೃಷ್ಣಪ್ರಸಾದ್, ಸಂಸ್ಕೃತಿಕ ಚಿಂತಕ ಡಾ.ಕೆ.ರಘುರಾಂ ವಾಜಪೇಯಿ, ಉದ್ಯಮಿ ಜಿ.ಮಂಜು, ಕುಕ್ಕರಹಳ್ಳಿ ಕರೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಡಾ.ಕೆ.ಎಂ.ಜಯರಾಮಯ್ಯ ಮೊದಲಾದವರು ಪಾಲ್ಗೊಳ್ಳುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನಂತರ ಮಧ್ಯಾಹ್ನ 3.30ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಆದರ್ಶನಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ಮೇಯರ್ ಶಾರದಮ್ಮ ಉದ್ಘಾಟಿಸುವರು, ಪ್ರಾಸ್ತಾವಿಕವಾಗಿ ಟಿ.ಎನ್.ದಾಸೇಗೌಡ, ಕ್ರೆಡಿಟ್-ಐ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಪಿ.ವರ್ಷ, ಪದ್ಮಾವತಿ ನಾಗರಾಜು ಮೊದಲಾದವರು ಭಾಗಿಯಾಗುವರು.

ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆಗೈದ ಮಹಿಳೆಯರಾದ ಯಶೋಧರಮ್ಮ ದಾಸಪ್ಪ ಆದರ್ಶ ನಾರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಂತರ ಸ್ತ್ರಿ ದನಿ ವಿಷಯವಾಗಿ ನಡೆಯುವ ಕವಿಗೋಷ್ಠಿಯನ್ನು ಸಾಹಿತಿ ಕೆರೋಡಿ ಎಂ.ಲೋಲಾಕ್ಷಿ ಉದ್ಘಾಟಿಸುವರು, ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಅಧ್ಯಕ್ಷತೆ ವಹಿಸುವರು. ಕಸಾಪ ಮಾಜಿ ಅಧ್ಯಕ್ಷ ಪ್ರೊ.ನಿ.ಗಿರೀಗೌಡ, ಅಲುಮೇಲಮ್ಮ ಮರೀಗೌಡ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಿಚ್ಚಿಸುವವರು ತಮ್ಮ ಕವನಗಳನ್ನು ಸಂಸ್ಥೆಗೆ ತಲುಪಿಸಬಹುದು ಎಂದು ಮನವಿ ಮಾಡಿದರು. ಮಾಹಿತಿಗಾಗಿ ಮೊ.ಸಂ. 9902698623 ಅನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಮಹರ್ಷಿ ಜನಸೇವಾ ಟ್ರಸ್ಟ್ ಅಧ್ಯಕ್ಷ ದೇವರಾಜ್ ಪಾಳೇಗಾರ್, ಕೃಷ್ಣಪ್ರಸಾದ್ ಲಕ್ಷ್ಮೈಗೌಡ, ದಾಸೇಗೌಡ ಇನ್ನಿತರರ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: