ಮೈಸೂರು

ವಿಶ್ವ ಮೂತ್ರಪಿಂಡ ದಿನಾಚರಣೆ : ಜೆಎಸ್ಎಸ್ ನಿಂದ ವಿಶೇಷ ಪ್ಯಾಕೇಜ್ ಬಿಡುಗಡೆ

ಮೈಸೂರು,ಮಾ.14 : ಜೆಎಸ್ಎಸ್ ಆಸ್ಪತ್ರೆಯು ವಿಶ್ವ ಮೂತ್ರಪಿಂಡ ದಿನಾಚರಣೆ ಅಂಗವಾಗಿ ‘ಮೂತ್ರಪಿಂಡ ಮತ್ತು ಮಹಿಳೆಯರ ಆರೋಗ್ಯ’ ಎಂಬ ಘೋಷವಾಕ್ಯದೊಂದಿಗೆ ರಾಜೇಂದ್ರ ಭವನದಲ್ಲಿ ಇಂದು  ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರು ನಂತರ ಮಾತನಾಡಿ, ಹೃದಯದಷ್ಟೇ ಕಾಳಜಿಯನ್ನು ಮೂತ್ರಪಿಂಡಕ್ಕೂ ಪ್ರಾಮುಖ್ಯತೆ ನೀಡಿ ಆರೋಗ್ಯವಾಗಿಟ್ಟುಕೊಳ್ಳಿ ಎಂದು ತಿಳಿಸಿದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್, ಡಾ.ಎಂ.ದಯಾನಂದ, ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವನಗೌಡಪ್ಪ, ಡಾ.ಎಂಗುರುಸ್ವಾಮಿ, ಬಸವರಾಜ್ ಕುಪ್ಪಸದ್ ಮೊದಲಾದವರು ಇದ್ದರು, ನೆಪ್ರೋಲಜಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥಶೆಟ್ಟಿ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣಗಳನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಕೇವಲ 399 ರೂಗಳಿಗೆ ಮೂತ್ರಪಿಂಡ ತಪಾಸಣಾ ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಲಾಯಿತು. (ಕೆ.ಎಂ.ಅರ್)

Leave a Reply

comments

Related Articles

error: