ಸುದ್ದಿ ಸಂಕ್ಷಿಪ್ತ

ಮಾ.16: ದರಪಟ್ಟಿ ಸಲ್ಲಿಸಲು ಕೊನೆ ದಿನಾಂಕ

ಮೈಸೂರು,ಮಾ.15:-   ಕರ್ನಾಟಕ ವಿಧಾನಸಭಾ ಸಭಾ ಸಾರ್ವತ್ರಿಕ ಚುನಾವಣೆ 2018 ರ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಕೇಂದ್ರಗಳಲ್ಲಿ ಕಂಟ್ರೋಲ್ ರೂಮ್ ತೆರೆಯಲು ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಗಣಕಯಂತ್ರ, ಪ್ರಿಂಟರ್, ಸ್ಕ್ಯಾನರ್ ಹಾಗೂ  ಇತರೆ ವಸ್ತುಗಳನ್ನು e – procurement plat form ಮೂಲಕ ಖರೀದಿಸಲು ಮಾರ್ಚ್ 10 ರಂದು ದರಪಟ್ಟಿಯನ್ನು ಕರೆಯಲಾಗಿದೆ.
ಆಸಕ್ತಿಯುಳ್ಳ ಏಜೆನ್ಸಿಯವರು ಮಾರ್ಚ್ 16 ಸಂಜೆ 4 ಗಂಟೆಯೊಳಗೆ e – procurement plat form ನಲ್ಲಿ ದರಪಟ್ಟಿಯನ್ನು ಸಲ್ಲಿಸಲು ತಿಳಿಸಿದೆ. ನಂತರ ಸಲ್ಲಿಸಲ್ಪಡುವ ಯಾವುದೇ ದರಪಟ್ಟಿಗಳನ್ನು ಸ್ವೀಕರಿಸುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ: 0821-2424079  ಹಾಗೂ e – procurement plat form   ನಲ್ಲಿ ಪಡೆಯಬಹುದಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: