ಸುದ್ದಿ ಸಂಕ್ಷಿಪ್ತ

ಮಾರ್ಚ್ 16 : ಮುಕ್ತ ಗ್ರಾಹಕರ ಸಮಾವೇಶ

ಮೈಸೂರು,ಮಾ.15:-  ಟಿ.ನರಸೀಪುರ ಮತ್ತು ಕೆ.ಆರ್.ನಗರದಲ್ಲಿ ಬಿ.ಎಸ್.ಎನ್.ಎಲ್ ಮುಕ್ತ ಗ್ರಾಹಕರ ಸಮಾವೇಶವನ್ನು ಮಾರ್ಚ್ 16 ರಂದು ಬೆಳಿಗ್ಗೆ 11 ಗಂಟೆಗೆ  ಬಿ.ಎಸ್.ಎನ್.ಎಲ್. ದೂರವಾಣಿ ವಿನಿಮಯ ಕೇಂದ್ರದ ಕಟ್ಟಡದಲ್ಲಿ ಆಯೋಜಿಸಲಾಗಿದೆ.
ಕೆ.ಆರ್.ನಗರ ದೂರವಾಣಿ ವಿನಿಮಯ ಕೇಂದ್ರದಲ್ಲೂ ಮಾರ್ಚ್ 24ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಟಿ.ನರಸೀಪುರ ಮತ್ತು ಕೆ.ಆರ್.ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಬಿ.ಎಸ್.ಎನ್.ಎಲ್ ಗ್ರಾಹಕರು ತಮ್ಮ ಪ್ರದೇಶಗಳಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಿ ದೂರ ಸಂಪರ್ಕ ಸೇವೆಗೆ ಸಂಬಂಧಿಸಿದ ತಮ್ಮ ದೂರುಗಳ ಬಗ್ಗೆ ಚರ್ಚಿಸಬಹುದು ಹಾಗೂ ಸೇವೆಯ ಅಭಿವೃದ್ಧಿಗಾಗಿ ಸಲಹೆಗಳ:ನ್ನು ನೀಡಬಹುದೆಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: