ಸುದ್ದಿ ಸಂಕ್ಷಿಪ್ತ
ಜಿಲ್ಲಾ ಬಂದ್ಗೆ ಬೆಂಬಲ, ಧರಣಿ
500 ಮತ್ತು 1000 ರೂ.ಗಳ ಅಮಾನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ದೇಶದ ಪ್ರತಿಪಕ್ಷಗಳು ನ.28ರಂದು ಕರೆ ನೀಡಿರುವ ಆಕ್ರೋಶ್ ದಿವಸ್ ಅಥವಾ ಭಾರತ್ ಬಂದ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಮೈಸೂರು ಜಿಲ್ಲಾ ಗ್ರಾಮಾಂತರ ಹಾಗೂ ನಗರ ಕಾಂಗ್ರೆಸ್ 28ರಂದು ನಡೆಯುವ ಬಂದ್ಗೆ ಸಹಕರಿಸಲು ಕೋರಿದೆ. 28ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಗಾಂಧಿಚೌಕದ ಗಾಂಧಿ ಪ್ರತಿಮೆಯ ಎದುರು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿ.ಜೆ. ವಿಜಯ್ ಕುಮಾರ್ ಹಾಗೂ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಎಸ್. ರವಿಶಂಕರ್ ಅವರು ತಿಳಿಸಿದ್ದಾರೆ.