ಮೈಸೂರು

ಎಐಸಿಸಿ ಸದಸ್ಯರಾಗಿ ಡಾ.ಪುಷ್ಪಾ ಅಮರನಾಥ್ ನೇಮಕ

ಮೈಸೂರು,ಮಾ.15:- ಮೈಸೂರು ಭಾಗದಿಂದ ಮುಕ್ತರುನ್ನೀಸಾ ಬೇಗಂ ಅವರು ಎಐಸಿಸಿ ಸದಸ್ಯರಾಗಿದ್ದರು. ಅವರ ನಿಧನದ ನಂತರ ಮೈಸೂರು ಭಾಗಕ್ಕೆ ಮಹಿಳಾ ಪ್ರಾತಿನಿಧ್ಯವಿರಲಿಲ್ಲ. ಕೆಪಿಸಿಸಿ ಸದಸ್ಯೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರು ಇದೀಗ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಂಸದ ಧ್ರುವ ನಾರಾಯಣ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಈಗಾಗಲೇ ಎಐಸಿಸಿ ಸದಸ್ಯರಾಗಿದ್ದಾರೆ. ಇದೀಗ ಪಕ್ಷ ಸಂಘಟನೆಯ ಜೊತೆ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಸಲಹೆ, ಸಮಾಲೋಚನೆ,ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇವರು ಶಾಸಕ ಹೆಚ್.ಪಿ.ಮಂಜುನಾಥ್ ಅವರ ಸಂಬಂಧಿಯೂ ಆಗಿದ್ದಾರೆ.

Leave a Reply

comments

Related Articles

error: