ಮೈಸೂರು

ಮಾ.17,18 ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸಮಾವೇಶ

ಮೈಸೂರು,ಮಾ.15 : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಕೇಂದ್ರ ಸರ್ಕಾರದ ದೌರ್ಜನ್ಯ ಕೊನೆಗೊಳಿಸುವ ಹಿನ್ನಲೆಯಲ್ಲಿ  ರಾಜಕೀಯ ಬೂಟಾಟಿಕೆ ಕೊನೆಗೊಳಿಸಿ ವಿದ್ಯಾರ್ಥಿಗಳ ರಕ್ಷಣೆಯನ್ನು ಖಾತರಿಪಡಿಸಿ ಎಂಬಾ ಘೋಷಾ ವಾಕ್ಯದೊಂದಿಗೆ ರಾಜ್ಯಮಟ್ಟದ ವಿದ್ಯಾರ್ಥಿಗಳ ಹಕ್ಕುಗಳ ಸಮಾವೇಶ ಹಾಗೂ ರ್ಯಾಲಿಯನ್ನು ಆಯೋಜಿಸಿದೆ.

ಮಾ.17ರಂದು ಮಧ್ಯಾಹ್ನ 2.30ರಿಂದ ಉದಯಗಿರಿಯ ಸಿಗ್ನಲ್ ನಿಂದ ಹೊರಡುವ ರ್ಯಾಲಿಯು ಶಾಂತಿನಗರದ ಜಂಕ್ಷನ್ ನಲ್ಲಿ ಸಮಾವೇಶಗೊಳ್ಳಲಿದ್ದು ನಂತರ ಬಹಿರಂಗ ಸಭೆ ನಡೆಯಲಿದ್ದು ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಬಿ.ಆರ್.ಭಾಸ್ಕರ್, ಐಎಎಸ್ ವಿದ್ಯಾರ್ಥಿ ಡಾ.ಶಿವಕುಮಾರ್, ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಸೇರಿದಂತೆ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಪಾಲ್ಗೊಳ್ಳುವರು ಎಂದು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕೀರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.18ರಂದು ಆರ್.ಕೆ.ಪ್ಯಾಲೇಸ್ ನಲ್ಲಿ ರಾಜ್ಯ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದ ಅವರು. 2016ರಿಂದ ಈಚೆಗೆ ಹೈದ್ರಾಬಾದ್ ವಿವಿಯ ವಿದ್ಯಾರ್ಥಿ ರೋಹಿತ್ ವೇಮಲ ಆತ್ಮಹತ್ಯೆ, ಜೆಎನ್ ಯೂ  ಘಟನೆ, ವಿದ್ಯಾರ್ಥಿಗಳ ಮೇಲೆ ನಡೆದಿರುವ ಸಾಮೂಹಿಕ ಹಲ್ಲೆಗಳು, ಅದನ್ನು ಹತ್ತಿಕ್ಕುವಲ್ಲಿ ಸರ್ಕಾರ ತಳೆದಿರುವ ಧೋರಣೆ, ಅಲ್ಲದೇ ರಾಜ್ಯ ಸರ್ಕಾರದ ನೈತಿಕಪೊಲೀಸ್ ಗಿರಿಯಿಂದ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ಆತಂಕದ ವಾತಾವರಣ ಮೂಡಿದ್ದು ಈ ನಿಟ್ಟಿನಲ್ಲಿ ಮುಂದಿನ ಹೋರಾಟಗಳ ರೂಪುರೇಷೆ ,ಬಗ್ಗೆ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ನದೀಮ್, ಕಾರ್ಯದರ್ಶಿ ಆರೀಫ್ ಶಿವಮೊಗ್ಗ, ರಿಯಾಝ್ ಕಡಂಬು, ತನ್ವೀಝ್ ಮೈಸೂರು ಇದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: