ಮನರಂಜನೆ

`ಅಟೆಂಪ್ಟ್ ಟು ಮರ್ಡರ್’ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲಿದ್ದಾರೆ ಕಿಚ್ಚ ಸುದೀಪ್

ಬೆಂಗಳೂರು,ಮಾ.15-ಅರುಣ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ `ಅಟೆಂಪ್ಟ್ ಟು ಮರ್ಡರ್ಚಿತ್ರದ ಟ್ರೈಲರ್ ಅನ್ನು ಮಾ.17 ರಂದು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ.

ಒಂದು ಕೊಲೆಯ ಸುತ್ತಾ ನಡೆದ ಘಟನೆಯನ್ನ ಸಿನಿಮಾವನ್ನಾಗಿ ಮಾಡಲಾಗಿದೆ. ಚಿತ್ರದಲ್ಲಿ ಬರೀ ಹೊಸಬರೆ ಇದ್ದು, ಚಿತ್ರ್ಕೆ ಬಿಗ್ ಸ್ಟಾರ್ ಗಳು ಬೆಂಬಲ ನೀಡುತ್ತಾ ಬಂದಿದ್ದಾರೆ. ಈ ಹಿಂದೆ ಚಿತ್ರದ ಹಾಡುಗಳನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರ ಟ್ರೈಲರ್ ಅನ್ನು ಸುದೀಪ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ.

ಅಟೆಂಪ್ಟ್ ಟು ಮರ್ಡರ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಅಮರ್ ವಹಿಸಿಕೊಂಡಿದ್ದು , ಎಸ್.ವಿ.ನಾರಾಯಣ್ ಹಾಗೂ ಎಸ್.ವಿ.ಕೃಷ್ಣಮೂರ್ತಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗೃಹಲಕ್ಷ್ಮಿ, ಲಕ್ಷ್ಮೀಬಾರಮ್ಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟ ವಿನಯ್ ಚಿತ್ರದ ನಾಯಕ ನಟ. ಇನ್ನು ಶೋಭಿತಾ, ಹೇಮಲತಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: