ಮೈಸೂರು

ಅತಿವೇಗದಿಂದ ಬಂದ ಕಾರು ಪಲ್ಟಿ

ಮೈಸೂರು,ಮಾ.15:- ಅತಿವೇಗದಿಂದ ಬಂದ ಕಾರೊಂದು ಪಲ್ಟಿ ಹೊಡೆದ ಘಟನೆ ವಿಜಯನಗರ ಎರಡನೇ ಹಂತದ ಕೆನರಾ ಬ್ಯಾಂಕ್ ಬಳಿ ನಡೆದಿದೆ.

ವಿಜಯನಗರ ಎರಡನೇ ಹಂತದ ಕೆನರಾ ಬ್ಯಾಂಕ್ ಬಳಿ ಕಾರೊಂದು ಅತಿವೇಗದಿಂದ ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಘಟನೆಯನ್ನು ನೋಡಿದವರು ತಕ್ಷಣ ವಿವಿಪುರಂ ಸಂಚಾರಿ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿವಿಪುರಂ ಸಂಚಾರಿ ಠಾಣೆಯ ಇನ್ಸಫೆಕ್ಟರ್ ರವಿ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದ್ದು, ಯಾರು ಎಲ್ಲಿಗೆ ಹೊರಟಿದ್ದರು, ಚಾಲನಾ ಪರವಾನಗಿ ಇದೆಯಾ..? ಕುಡಿದು ಚಾಲನೆ ಮಾಡುತ್ತಿದ್ದರಾ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.ಅಪಘಾತ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಕಾರಿನಲ್ಲಿ ಐವರಿದ್ದರು ಎನ್ನಲಾಗಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಕಾಲೇಜು ಯುವಕರ ಕೈಲಿ ಅವರ ಮನೆಯವರು ವಾಹನ ಕೊಟ್ಟು ಕಳುಹಿಸುತ್ತಾರೆ. ನಮಗೆ ರೋಡಿನಲ್ಲಿ ನಡೆದಾಡುವುದೇ ಪ್ರಯಾಸವಾಗಿಬಿಟ್ಟಿದೆ. ಜೀವವನ್ನು ಅಂಗೈನಲ್ಲಿ ಹಿಡಿದೇ ಓಡಾಡಬೇಕು. ತುಂಬಾ ವೇಗವಾಗಿ ಚಾಲನೆ ಮಾಡುತ್ತಾರೆ. ಪೊಲೀಸರು ಈ ಕುರಿತು ಗಮನ ಹರಿಸಿ ಎಂದು ಸ್ಥಳೀಯರು ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: