ಸುದ್ದಿ ಸಂಕ್ಷಿಪ್ತ

ಮಾರ್ಚ್ 17 : ಕುಂದು ಕೊರತೆ ಸಭೆ

ಮೈಸೂರು,ಮಾ.16:-  ಟಿ.ನರಸೀಪುರ ತಾಲೂಕಿನ ಉಪವಿಭಾಗಗಳು ಟಿ.ನರಸೀಪುರ ಉಪವಿಭಾಗ ಹಾಗೂ ಬನ್ನೂರು  ಉಪವಿಭಾಗದಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ನಡೆಸಲು ಉದ್ದೇಶಿಸಲಾಗಿರುತ್ತದೆ.
ಮಾರ್ಚ್ 17 ರಂದು ಬೆಳಿಗ್ಗೆ 11 ಗಂಟೆಗೆ ಬನ್ನೂರು ಚಾ.ವಿ.ಸ.ನಿ.ನಿ. ಕಚೇರಿ ಆವರಣದಲ್ಲಿ ಬನ್ನೂರು, ಅತ್ತಳ್ಳಿ, ಕೇತುಪುರ, ರಂಗಸಮುದ್ರ, ಬೀಡನಹಳ್ಳಿ, ಹನುಮನಾಳು, ಕೊಡಗಹಳ್ಳಿ, ಬಿ.ಸಿ.ಹಳ್ಳಿ, ಹೆಗ್ಗೂರು, ಮಲಿಯೂರು, ತುರುಗನೂರು, ಅಂಕನಹಳ್ಳಿ, ಚಿದ್ರವಳ್ಳಿ, ಚಾಮನಹಳ್ಳಿ, ಮಾಕನಹಳ್ಳಿಯ ಗ್ರಾಹಕರು ಕುಂದು ಕೊರತೆಗಳು ಸಲ್ಲಿಸಬಹುದು.
ಅಂದು ಮಧ್ಯಾಹ್ನ 3 ಗಂಟೆಗೆ  ಟಿ. ನರಸೀಪುರ ಚಾ.ವಿ.ಸ.ನಿ.ನಿ ಕಛೇರಿ ಅವರಣದಲ್ಲಿ ಭೈರಾಪುರ, ಕಿರಗಸೂರು, ಗರ್ಗೇಶ್ವರಿ, ಹೊಸಕೋಟೆ, ತುಂಬಲ, ಮೂಗೂರು, ವಾಟಾಳು, ಕೊತ್ತೇಗಾಲ, ಆಲಗೂಡು, ಕುರಹಟ್ಟಿ, ಮಾದಾಪುರ, ಹೆಮ್ಮಿಗೆ, ಟಿ ದೊಡ್ಡಾಪುರ, ಕಲಿಯೂರು, ತಲಕಾಡು, ಬಿ.ಸಿ.ಹಳ್ಳಿ, ಹೊಳೆಸಾಲು, ಬೆನಕನಹಳ್ಳಿ, ದೊಡ್ಡೇಬಾಗಿಲು, ಕೊಳತ್ತೂರು, ಮುತ್ತಲವಾಡಿ, ಸೋಮನಾಥಪುರ, ಸೋಸಲೆ, ಉಕ್ಕಲಗೆರೆಯ ಗ್ರಾಹಕರು ಕುಂದು ಕೊರತೆಗಳು ಸಲ್ಲಿಸಬಹುದು ಎಂದು ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.         (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: