ಕರ್ನಾಟಕಮನರಂಜನೆ

ಜಾಹಿರಾತಿನಲ್ಲಿ ಕಾಣಿಸಿಕೊಂಡ ಬಾಲನಟಿ ಈಗ ನಾಯಕಿ

ಬೆಂಗಳೂರು,ಮಾ,16: ಧೂಮಪಾನ ಆರೋಗ್ಯಕ್ಕೆ ಹಾನಿಕರ  ಎಂದು ಎಲ್ಲಾ ಚಿತ್ರಮಂದಿರಗಳಲ್ಲೂ ಹೇಳುತ್ತಿದ್ದಾಕೆ ಸದ್ಯ ಸ್ಯಾಂಡಲ್ ವುಡ್ಗೆ ಎಂಟ್ರಿಕೊಡಲು ರೆಡಿಯಾಗಿದ್ದಾಳೆ.

ಪ್ರತಿಯೊಂದು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ಹೋದಾಗ ನೋ ಸ್ಮೋಕಿಂಗ್ ಎಂಬ ಜಾಹೀರಾತು ಬರುತ್ತದೆ. ಆ ಜಾಹಿರಾತಿನಲ್ಲಿ ಕಾಣಿಸಿಕೊಂಡ ಆ ಪುಟ್ಟ ಹುಡುಗಿ ಸಿಮ್ರಾನ್ ಸದ್ಯ ಸ್ಯಾಂಡಲ್ ವುಡ್‍ನಲ್ಲಿ ‘ಕಾಜಲ್’ ಚಿತ್ರದ ಮೂಲಕ ನಟಿ ಆಗಿ ಮಿಂಚಲು ಸಿದ್ಧರಾಗಿದ್ದಾರೆ.

ನಿರ್ದೇಶಕ ಸುಮಂತ್ ಕ್ರಾಂತಿ ನಿರ್ದೇಶನದ ‘ಕಾಜಲ್’ ಸಿನಿಮಾದ ಕರಿಯ-2 ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಂತೋಷ್ ನಾಯಕರಾಗಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ಆನೇಕಲ್ ಬಾಲರಾಜ್ ಬಂಡವಾಳ ಹೂಡಿದ್ದಾರೆ. ‘ಕಾಜಲ್’ ಚಿತ್ರದ ಫಸ್ಟ್ ಲುಕ್ ಇದೇ ತಿಂಗಳು 31 ಚಿತ್ರದ ನಾಯಕ ಸಂತೋಷ್ ಹುಟ್ಟುಹಬ್ಬದಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. (ವರದಿ; ಪಿ.ಎಸ್ )

Leave a Reply

comments

Related Articles

error: