ಮೈಸೂರು

ಮಾಜಿ ಸಂಸದ ವಿಶ‍್ವನಾಥ್‍ ಮಾನಸಿಕ ಅಸ್ವಸ್ಥ, ಚಿಕಿತ್ಸೆ ಅವಶ‍್ಯವಿದೆ: ಸಂಸದ ಪ್ರತಾಪ್ ಸಿಂಹ

ಪ್ರಧಾನಿ ನರೇಂದ್ರ ಮೋದಿಯವರನ್ನು ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಮಾಜಿ ಸಂಸದ ವಿಶ‍್ವನಾಥ್ ವಿರುದ‍್ಧ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅವರೊಬ್ಬ ಮಾನಸಿಕ ಅಸ್ವಸ್ಥ. ಕೇವಲ ದೈಹಿಕ ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಅವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆಯೂ ಇದೆ. ಅವರು ವಿಶ‍್ವನಾಥ ಅಲ್ಲ ಗಬ್ಬುನಾಥ್” ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

“ಅಸಂಬದ್ಧವಾಗಿ ಮಾತನಾಡುವುದನ್ನು ಚಾಳಿಯಾಗಿಸಿಕೊಂಡಿರುವ ವಿಶ್ವನಾಥ್, ಸೀಮೆ ಎಣ್ಣೆ ಬೆರೆಸಿ ಕಲಬೆರಕೆ ಪೆಟ್ರೋಲ್ ಮಾರಾಟ ಹಾಗೂ ಹೋಟೆಲ್ ಜಾಗ ಕಬಳಿಸಿ ಸಂಪಾದಿಸಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಅವರದು ಬೊಗಳುವ ಸಂಸ್ಕೃತಿ. ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಾ ಮಾನಸಿಕ ಅಸ್ವಸ್ಥರಂತಾಗಿದ್ದಾರೆ” ಎಂದು ತೀವ್ರವಾಗಿ ಲೇವಡಿ ಮಾಡಿದರು. ದುಬಾರಿ ವಾಚ್ ಪ್ರಕರಣದಿಂದ ಪೇಚಿಗೆ ಸಿಲುಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ್ ದಿವಸ್ ಪ್ರತಿಭಟನೆಗಾಗಿ ವಿಧಾನ ಮಂಡಲ ಕಲಾಪವನ್ನೇ ಮುಂದೂಡಿರುವುದು ಖಂಡನೀಯ ಎಂದರು.

Leave a Reply

comments

Related Articles

error: