ಪ್ರಮುಖ ಸುದ್ದಿಮೈಸೂರು

ಔಷಧಿಗಳ ಕೊರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು : ಮನಸುಖ್ ಲಕ್ಷ್ಮಣಭಾಯ್ ಮಾಂಡವೀಯ

ಮೈಸೂರು,ಮಾ.16:- ಔಷಧಗಳು ಸಿಗಲಿಲ್ಲ ಅಥವಾ ಔಷಧಿಗಳ ಕೊರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂದು ಕೇಂದ್ರ ರಾಜ್ಯ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಮನಸುಖ್ ಲಕ್ಷ್ಮಣಭಾಯ್ ಮಾಂಡವೀಯ ತಿಳಿಸಿದರು.

ಮೈಸೂರಿನ  ಲಿಂಗಾಬುಧಿ ಪಾಳ್ಯದಲ್ಲಿರುವ ಯೂನಿವರ್ಸಿಟಿ ಲೇಔಟಿನಲ್ಲಿ ನೂತನವಾಗಿ ಆರಂಭಿಸಲಾದ ಪ್ರಧಾನ ಮಂತ್ರಿ  ಭಾರತೀಯ ಜನ ಔಷಧಿ ಕೇಂದ್ರವನ್ನು ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಿ,ಮಾಧ್ಯಮಗಳೊಂದಿಗೆ ಮಾತನಾಡಿದರು. ದೇಶದ ಬಡವರಿಗೆ, ಶೋಷಿತ ಜನರ ಅನುಕೂಲಕ್ಕಾಗಿ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಕಡಿಮೆ ದುಡ್ಡಿನಲ್ಲಿ ಔಷಧಿಗಳು ದೊರೆಯಲಿವೆ.ಅದಕ್ಕಾಗಿ ದೇಶದಾದ್ಯಂತ ಜನ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಔಷಧಿಗಳನ್ನು ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದೇಶದಾದ್ಯಂತ 3300ಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳು ಆರಂಭವಾಗಿವೆ. ಭವಿಷ್ಯದಲ್ಲಿ ದೇಶದ ಪ್ರತಿ ಮೂಲೆಯಲ್ಲಿಯೂ ಜನ ಔಷಧಿ  ಕೇಂದ್ರ ಸ್ಥಾಪನೆ ಮಾಡಲಾಗುವುದು. ಈಗಾಗಲೇ 800 ಔಷಧಿಗಳು ಲಭ್ಯವಿದ್ದು ಅದನ್ನು ಒಂದು ಸಾವಿರಕ್ಕೆ ಏರಿಸುವ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಾಜಿ ಸಚಿವ ಎಸ್.ಎ.ರಾಮದಾಸ್, ಕೋಟೆ ಶಿವಣ್ಣ,ಹೇಮಂತ್ ಮತ್ತಿತರರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: