ಕರ್ನಾಟಕಮೈಸೂರು

“ಆಕ್ರೋಶ್ ದಿವಸ್” ಪೂರ್ವ ಸಿದ್ಧತೆಯಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ

ಕೇಂದ್ರದ ಮೋದಿ ನೇತೃತ್ವದ ಸರ್ಕಾರವು ದೇಶದ ದೊಡ್ಡ ಮೊತ್ತದ ನೋಟುಗಳನ್ನು ಅಮಾನ್ಯಗೊಳಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿ ನಾಳೆ ನ.28 ರಂದು ವಿರೋಧ ಪಕ್ಷಗಳು “ಆಕ್ರೋಶ ದಿವಸ”ವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಎಸ್‍ಆರ್‍ಸಿಟಿ, ನಗರ ಸಾರಿಗೆ, ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಯಾದಿಯಾಗಿ ಪಕ್ಷದ ಮುಖಂಡರು ಮೌಖಿಕ ಅದೇಶವನ್ನು ನೀಡಿ ಕಾಗ್ರೆಸ್ ನಾಯಕರು ಹೈಕಮಾಂಡ್ ಆದೇಶ ಪಾಲಿಸಿದ್ದಾರೆ. ಪ್ರಾಯಶಃ ನಾಳೆ ಸೋಮವಾರ ಸಾರ್ವಜನಿಕ ಸಂಚಾರ ವ್ಯವಸ್ಥೆ ದುರ್ಲಭವಾಗಲಿದ್ದು, ಸರ್ಕಾರಿ ವಾಹನಗಳು ರಸ್ತೆಗಿಳಿಯುವುದು ಅನುಮಾನವಾಗಿದೆ. ಪ್ರಯಾಣಿಕರು ಈಗಲೇ ಎಚ್ಚೆತ್ತುಕೊಂಡರೆ ಅನುಕೂಲ ಎನ್ನುವುದು ಅಧಿಕಾರಿಗಳ ಮಾತು.

ನೋಟ್‍ ಬ್ಯಾನ್‍ ಅನ್ನು ಶೇ.92ರಷ್ಟು ದೇಶವಾಸಿಗಳು ಸ್ವಾಗತಿಸಿದ್ದು ಭಾರತ್`ಬಂದ್‍ಗೆ ಯಾವ ರೀತಿ ಪ್ರತಿಕ್ರಿಯಿಸುವರು ಎಂದು ಕಾದು ನೋಡಬೇಕು. ರಾಜ್ಯ ಸರ್ಕಾರ ಈಗಾಗಲೇ ಪ್ರತಿಭಟನೆಯ ಪೂರ್ವ ತಯಾರಿಯಲ್ಲಿದ್ದು ಭಾರತ್ ಬಂದ್ ವೇಳೆ ಪ್ರತಿಭಟನೆ, ಮುಷ್ಕರದಿಂದ ಸ್ಥಿರ ಹಾಗೂ ಚರ ಆಸ್ತಿಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.

Leave a Reply

comments

Related Articles

error: