
ಮೈಸೂರು
ಯೋಧರಿಗೆ ನಮನ ಸಲ್ಲಿಸಿದ ಯುವ ಭಾರತ ಸಂಘಟನೆ
ಮೈಸೂರಿನ ಚಾಮುಂಡಿಪುರಂನಲ್ಲಿ ಯುವ ಭಾರತ್ ಸಂಘಟನೆ ವತಿಯಿಂದ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮೊಂಬತ್ತಿ ಹಚ್ಚಿ ಗೌರವ ಸಲ್ಲಿಸಲಾಯಿತು.
ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರ ವೃತ್ತದಲ್ಲಿ ಯುವ ಭಾರತ್ ಸಂಘಟನೆಯ ಕಾರ್ಯಕರ್ತರು ಮುಂಬೈ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಇಂದಿಗೆ 8 ವರ್ಷಗಳಾಯಿತು. ಅಂದು ಜೀವದ ಹಂಗು ತೊರೆದು ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ವೀರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೆನೆಯುತ್ತ, ಮೊಂಬತ್ತಿ ಹಚ್ಚಿ ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದೇವೆ ಎಂದರು. ಈ ಸಂದರ್ಭ ಜೋಗಿ ಮಂಜು, ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರವಿತೇಜ, ಶ್ರೀಕಾಂತ್ ಕಶ್ಯಪ್, ರಘು ಅರಸ್, ಸಂದೀಪ್, ಕೃಷ್ಣ, ಭಾನುಪ್ರಕಾಶ್, ಪದ್ಮನಾಭ್, ನಾಗರಾಜು, ಪ್ರವೀಣ್, ದಿನೇಶ್ ಕಾರ್ಯಪ್ಪ ಉಪಸ್ಥಿತರಿದ್ದರು.