ಕರ್ನಾಟಕ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಇರಿದ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ

ರಾಜ್ಯ(ಬೆಂಗಳೂರು)ಮಾ.16:-  ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ ಆರೋಪಿ ತೇಜ್‌ರಾಜ್ ಶರ್ಮಾನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ತೇಜ್‌ರಾಜ್ ಶೆಟ್ಟಿಯ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ನ್ಯಾಯಾಧೀಶ ಮಹೇಶ್ ಅವರ ಮುಂದೆ ಹಾಜರುಪಡಿಸಿದ್ದರು.

ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ನೀಡಿದ್ದಾರೆ. ಈ ನಡುವೆ ತೇಜ್‌ರಾಜ್ ಶರ್ಮಾನ ರಕ್ತದ ಮಾದರಿಯನ್ನು ಪಡೆದಿರುವ ಪೊಲೀಸರು ಅದನ್ನು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಈಗಾಗಲೇ ಡಾ. ಸತೀಶ್ ನೇತೃತ್ವದ ತಂಡ ಪರೀಕ್ಷೆ ನಡೆಸಿದ್ದು, ಆರೋಪಿಯ ಕೈಬರಹವನ್ನು ಬಿಳಿ ಹಾಳೆಯ ಮೇಲೆ ಬರೆಸಿಕೊಂಡು ನ್ಯಾಯಮೂರ್ತಿಗಳ ಒಪ್ಪಿಗೆ ಪಡೆದು ಸಂಗ್ರಹಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: