ಮೈಸೂರು

ಆತ್ಮಶುದ್ಧಿಯಿಂದ ಮಾಡಿದ ಕಾರ್ಯದಿಂದ ಸತ್ಫಲ: ಡಾ. ಅನಿಲ್ ಕುಮಾರ್

ಆತ್ಮಶುದ್ಧಿಯಿಂದ ಮಾಡಿದ ಕಾರ್ಯಗಳಿಂದ ಸತ್ಫಲಗಳು ಲಭಿಸಲಿದೆ ಎಂದು ಮೈಸೂರಿನ ಕಲ್ಪ ಹೆರಿಟೇಜ್ ಟ್ರಸ್ಟ್ ನ ಟ್ರಸ್ಟಿ ಡಾ. ವಿ.ಆರ್. ಅನಿಲ್ ಕುಮಾರ್ ತಿಳಿಸಿದರು.

ಮೈಸೂರಿನ ಸರಸ್ವತಿಪುರಂನ ಸರ್ಕಾರಿ ಮುದ್ರಣಾಲಯದ ಎದುರು ಇರುವ ಡಾ. ಎಸ್. ರಾಧಾಕೃಷ್ಣ ಭವನದಲ್ಲಿ ಭಾನುವಾರ ಮೈಸೂರು ವಿಶ್ವವಿದ್ಯಾನಿಲಯದ ಡಾ. ಎಸ್. ರಾಧಾಕೃಷ್ಣನ್ ತತ್ವಶಾಸ್ತ್ರ ಮತ್ತು ಭಾರತೀಯ ಸಂಸ್ಕೃತಿ ಕೇಂದ್ರದ ವತಿಯಿಂದ ಆಯೋಜಿಸಲಾದ ವಿಶೇಷ ಉಪನ್ಯಾಸ ಮಾಲಿಕೆ-16 ಇದರಲ್ಲಿ ಮಹರ್ಷಿ ಯಾಜ್ಞವಲ್ಕ್ಯ ಕುರಿತು ಅನಿಲ್ ಕುಮಾರ್ ಉಪನ್ಯಾಸ ನೀಡಿದರು.

ಸಂತರಲ್ಲಿ ನಾವು ಅವಧೂತ, ಸನ್ಯಾಸಿ, ತಪಸ್ವಿ, ಸಾಧು, ಋಷಿ ಹೀಗೆ 5 ಹಂತಗಳನ್ನು ಕಾಣಬಹುದು. ಅವರಲ್ಲಿ ಅವಧೂತರು ಸಾಧನೆಗೈಯ್ಯುತ್ತ ತಮಗೆ ಹೇಗೆ ಬೇಕೋ ಹಾಗೆ ಜೀವಿಸುತ್ತಾರೆ. ತಪಸ್ವಿಗಳು ಕಠಿಣತಮ ತಪಸ್ಸುಗಳನ್ನಾಚರಿಸುತ್ತಾರೆ ಎಂದು ಪ್ರತಿ ಹಂತದ ಕುರಿತು ವಿವರಣೆ ನೀಡಿದರು. ನಮ್ಮಿಂದ ಯಾರಿಗೂ ಕೆಟ್ಟದ್ದಾಗಬಾರದು. ಆದಷ್ಟು ನಾವು ಇನ್ನೊಬ್ಬರಿಗೆ ಒಳಿತನ್ನು ಮಾಡಲು ಮುಂದಾಗಬೇಕು ಎಂದು ತಿಳಿಸಿದರಲ್ಲದೇ ತನಗೆ ಯಾಕೆ ಇದರ ಮೇಲೆ ತಿಳಿದುಕೊಳ್ಳುವ ಆಸಕ್ತಿ ಹುಟ್ಟಿತು ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತಾ ಅಮೃತಾನಂದಮಯಿ ಮಠದ ಬ್ರಹ್ಮಚಾರಿ ಕೃಷ್ಣಕುಮಾರ್  ಅವರು ಅಷ್ಟಾವಕ್ರ ಗೀತೆಯನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭ ಸಂಯೋಜಕ ಡಾ.ಸಿ.ಪಿ.ರಾಮಶೇಷ, ಪ್ರೊ.ಜಿ.ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: