ದೇಶಪ್ರಮುಖ ಸುದ್ದಿ

ರಾಷ್ಟ್ರಗೀತೆಯಲ್ಲಿ `ಈಶಾನ್ಯ ಭಾರತ’ ಪದ ಸೇರ್ಪಡೆಗೊಳಿಸಿ: ಕಾಂಗ್ರೆಸ್ ರಾಜ್ಯಸಭಾ ಸದಸ್ಯನಿಂದ ಖಾಸಗಿ ಮಸೂದೆ ಮಂಡನೆ

ನವದೆಹಲಿ,ಮಾ.17-ರಾಷ್ಟ್ರಗೀತೆಯಲ್ಲಿ ಈಶಾನ್ಯ ಭಾರತ ಪದ ಸೇರ್ಪಡೆಗೊಳಿಸುವಂತೆ ಕೋರಿ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ರಿಪುನ್ ಬೋರಾ ಖಾಸಗಿ ಮಸೂದೆ ಮಂಡಿಸಿದ್ದಾರೆ.

ರಾಷ್ಟ್ರಗೀತೆಯಲ್ಲಿ ಬರುವ ಸಿಂಧ್ ಈಗ ಪಾಕಿಸ್ತಾನಕ್ಕೆ ಸೇರಿದೆ. ಸಿಂಧ್ ಈಗ ಭಾರತದ ಭಾಗವಾಗಿಲ್ಲ. ಈಶಾನ್ಯ ಭಾರತ ದೇಶದ ಅತ್ಯಂತ ಪ್ರಮುಖ ಭಾಗವಾಗವಾಗಿದೆ. ಹೀಗಾಗಿ ರಾಷ್ಟ್ರಗೀತೆಯಲ್ಲಿ ಈಶಾನ್ಯ ಭಾರತ ಪದ ಸೇರ್ಪಡೆ ಮಾಡಬೇಕೆಂದು ಮಸೂದೆ ಮಂಡಿಸಿದ್ದಾರೆ.

1911ರಲ್ಲಿ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೊರ್ ಬಂಗಾಳಿಯಲ್ಲಿ ‘ಜನಗಣಮನ’ ಗೀತೆ ರಚಿಸಿದ್ದು, ಆಗ ಭಾರತದ ವ್ಯಾಪ್ತಿ ಬಲೂಚಿಸ್ತಾನದವರೆಗೂ ವಿಸ್ತರಿಸಿದ್ದುದರಿಂದ, ಸಿಂಧ್ ಭಾರತದ ಭಾಗವಾಗಿ ಪರಿಗಣಿಸಲ್ಪಟ್ಟಿತ್ತು. 1947ರಲ್ಲಿ ದೇಶವಿಭಜನೆಯ ವೇಳೆ ಸಿಂಧ್ ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟಿತ್ತು. ಗೀತೆಯ ಹಿಂದಿ ಆವೃತ್ತಿಗೆ 1950, ಜ.24 ರಂದು ಸಂಸತ್ತಿನಲ್ಲಿ ರಾಷ್ಟ್ರಗೀತೆಯ ಮಾನ್ಯತೆ ನೀಡಲಾಗಿತ್ತು. (ಎಂ.ಎನ್)

Leave a Reply

comments

Related Articles

error: