ಮೈಸೂರು

ರೋಗಿಗಳಿಗೆ ನೂರು ರೂ. ಚಿಲ್ಲರೆ ನೀಡಿ ಉದಾರತೆ ಮೆರೆಯುತ್ತಿರುವ ಗಾಳಿಪಟ ತಜ್ಞ

ಕೇಂದ್ರ ಸರ್ಕಾರ 500 ಹಾಗೂ 1000ರೂ.ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿರುವುದರಿಂದ ಆಸ್ಪತ್ರೆಗಳಲ್ಲಿ ರೋಗಿಗಳು ಚಿಲ್ಲರೆಯಿಲ್ಲದೇ ಪರದಾಡುವಂತಾಗಬಾರದು ಎನ್ನುವ ದೃಷ್ಟಿಯಿಂದ ಅಂತರರಾಷ್ಟ್ರೀಯ  ಗಾಳಿಪಟ ತಜ್ಞ ಬೆಂಗಳೂರಿನ ವಿ. ಕೃಷ್ಣೋಜಿರಾವ್ ಅವರು ರೋಗಿಗಳಿಗೆ ಚಿಲ್ಲರೆ ನೀಡುವ ಮೂಲಕ ಉದಾರತೆಯನ್ನು ಮೆರೆದಿದ್ದಾರೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯ ಬಳಿ ಭಾನುವಾರ ಆಗಮಿಸಿರುವ ವಿ. ಕೃಷ್ಣೋಜಿರಾವ್ ಅವರು ಹಳೆಯ ನೋಟು ಚಾಲಾವಣೆ ರದ್ದು ಕುರಿತಂತೆ ಮೋದಿಯವರ ಕ್ರಮವನ್ನು ಶ್ಲಾಘಿಸಿದರಲ್ಲದೆ, ಅವರನ್ನು ಯಾರೂ ಶಪಿಸಿಸಬಾರದು ಎನ್ನುವ ದೃಷ್ಟಿಯಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು. ರೋಗಿಗಳಿಗೆ ತನ್ನ ಕೈಲಾದ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದೇನೆ ಎಂದರು. ಕೆ.ಆರ್. ಆಸ್ಪತ್ರೆಯ ರೋಗಿಗಳಿಗೆ 100 ರೂ. ನೋಟುಗಳನ್ನು ನೀಡಿದರು.

ಇವರು 50 ಸಾವಿರದಿಂದ ಒಂದು ಲಕ್ಷ ರೂ.ಗಳ ವರೆಗಿನ ಚಿಲ್ಲರೆಯನ್ನು ತಂದಿದ್ದು, ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿರುವ ರಶೀದಿ ತೋರಿಸಿದಲ್ಲಿ ಅವರಿಗೆ ನೂರು ರೂ.ಗಳ ಚಿಲ್ಲರೆಯನ್ನು ನೀಡುತ್ತಿದ್ದಾರೆ. ಅವರಿಗೆ ಅವರ ಸ್ನೇಹಿತರಾದ ಚಂದ್ರಶೇಖರ್, ನಿರಂಜನರಾವ್ ಕದಂ, ಸಂತೋಷ್ ಸಾಥ್ ನೀಡಿದ್ದಾರೆ. ಮೈಸೂರಿನಲ್ಲಿರುವ ಅಂತರರಾಷ್ಟ್ರೀಯ ಪ್ರವಾಸಿಗರಿಗೂ ಕೂಡ 500 ರೂ.ಗಳಿಗೆ ಚಿಲ್ಲರೆ ನೀಡುವುದಾಗಿ ತಿಳಿಸಿದ್ದಾರೆ.

Leave a Reply

comments

Related Articles

error: