ದೇಶಪ್ರಮುಖ ಸುದ್ದಿ

ಮೋದಿ ದ್ವೇಷದ ರಾಜಕಾರಣ ಮಾಡುತ್ತಾರೆ, ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ : ರಾಹುಲ್ ಗಾಂಧಿ

ದೇಶ(ನವದೆಹಲಿ)ಮಾ.17:-  ಪ್ರಧಾನಿ ನರೇಂದ್ರ ಮೋದಿ ಜಾತಿ ಧರ್ಮದ ಹೆಸರಿನಲ್ಲಿ ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿ  ಇಂದಿರಾಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡದ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದರು. ಮೋದಿ ಜಾತಿ ಧರ್ಮದ ಹೆಸರಿನಲ್ಲಿ ದೇಶದಲ್ಲಿ ದ್ವೇಷವನ್ನು ಹರಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ದೇಶವನ್ನು ವಿಭಜಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸುತ್ತ ಪ್ರೀತಿಯ ರಾಜಕಾರಣ ಮಾಡುತ್ತಿದೆ. ದೇಶಕ್ಕೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ದಾರಿ ತೋರಿಸಲಿದೆ. ಕಾಂಗ್ರೆಸ್ ಪಕ್ಷ ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುತ್ತದೆ. ಪಕ್ಷದ ದೇಶದ ಪ್ರತಿಯೊಬ್ಬ ವ್ಯಕ್ತಿಗೋಸ್ಕರ ಕೆಲಸ ಮಾಡುತ್ತದೆ. ಕೈ ಸಂಕೇತ ಕಾಂಗ್ರೆಸ್ ಪಕ್ಷದ ಸಂಕೇತ. ದೇಶವನ್ನು ಒಗ್ಗಟ್ಟಾಗಿಟ್ಟುಕೊಳ್ಳುವುದರ ಸಂಕೇತ. ನಮಗೆ ಮಾರ್ಗವನ್ನು ತೋರಿಸುತ್ತದೆ. ಮತ್ತು ಇದೇ ಕೈ ಭಾರತ ದೇಶವನ್ನು ಮುನ್ನಡೆಸಲಿದೆ ಎಂದರು.ಇದೇ ವೇಳೆ ದೇಶದಲ್ಲಿನ ನಿರುದ್ಯೋಗ ಸಮಸ್ಯೆಗಳ ಕುರಿತೂ ಕೇಂದ್ರದ ಬಿಜೆಪಿ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಪ್ರಧಾನಿ ಮೋದಿ ದೇಶದ ಯುವಕರಿಗೆ ಮೋಸ ಮಾಡುತ್ತಿದ್ದಾರೆ. ಯುವಕರು ಮೋದಿ ಕಡೆ ನೋಡಿದರೆ ಅವರಿಗೆ ದಾರಿ ಕಾಣಿಸುವುದಿಲ್ಲ.ಅವರು ದಾರಿ ಹುಡುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯುವಕರಿಗೆ ದಾರಿ ತೋರಿಸಲಿದೆ. ದೇಶವಿಂದು ನಿತ್ರಾಣಗೊಂಡಿದೆ. ಮೋದಿಯವರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ ಎಂದರು. 2019ರ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಈಗಿನಿಂದಲೇ ಪಕ್ಷ ಸಿದ್ಧವಾಗಬೇಕಿದೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಗುಲಾಂ ನಬಿ ಆಜಾದ್, ಎ.ಕೆ.ಆ್ಯಂಟನಿ, ಜನಾರ್ದನ್ ದ್ವಿವೇದಿ, ಪಕ್ಷದ ರಾಜ್ಯದ ಘಟಕಗಳು, ಜಿಲ್ಲಾ ಮತ್ತು ಬ್ಲಾಕ್ ಘಟಕಗಳ ಮುಖಂಡರು ಉಪಸ್ಥಿತರಿದ್ದರು.

ಈ 84ನೇ ಅಧಿವೇಶನದಲ್ಲಿ ರಾಜಕೀಯ, ಆರ್ಥಿಕ, ವಿದೇಶಾಂಗ ವ್ಯವಹಾರಗಳು, ಕೃಷಿ, ನಿರುದ್ಯೋಗ ಮತ್ತು ಬಡತನ ನಿರ್ಮೂಲನ ಕುರಿತ ಪ್ರಸ್ತಾಪ, ಮತ್ತು ಚರ್ಚೆಗಳು ನಡೆಯಲಿದ್ದು, ಚರ್ಚೆಯ ವೇಳೆ ಹಿರಿಯ ನಾಯಕರು, ಮುಖಂಡರುಗಳಿಗೆ ವೇದಿಕೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ (ಎಸ್.ಎಚ್)

Leave a Reply

comments

Related Articles

error: