ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರೆಯೇ ಚಿರಂಜೀವಿ ಸೋದರ ಪವನ್ ಕಲ್ಯಾಣ್?

ಬೆಂಗಳೂರು (ಮಾ.17): ತೆಲುಗಿನ ಜನಪ್ರಿಯ ನಟ ಹಾಗೂ ನಟ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ್ ಅವರು ಜೆಡಿಎಸ್ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈಜೊಡಿಸಿ ಕರ್ನಾಟಕ ಹಾಗೂ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಕೋಲಾರ, ತುಮಕೂರು, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಪ್ರಚಾರ ನಡೆಸುತ್ತಾರೆ ಎಂಬ ವರದಿಗಳು ಬಂದಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ ಮೂರನೇ ವಾರ ಅಥವಾ ನಾಲ್ಕನೇ ವಾರ ಪವನ್ ಕಲ್ಯಾಣ್ ಜೆಡಿಎಸ್ ಪರ ಪ್ರಚಾರ ಆರಂಭಿಸಲಿದ್ದಾರಂತೆ. ತೆಲುಗು ಭಾಷಿಗರು ಹೆಚ್ಚಾಗಿರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಜಿಲ್ಲೆಗಳಲ್ಲಿ ಪವನ್ ಕಲ್ಯಾಣ ಪ್ರಚಾರ ಮಾಡಲಿದ್ದಾರೆ. ಜಾಗ್ವಾರ್ ಸಿನಿಮಾದ ಹೀರೋ ಹಾಗೂ ಹೆಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ಪವನ್ ಕಲ್ಯಾಣ್ ಅವರ ಜೊತೆಗೆ ಇರಲಿದ್ದಾರಂತೆ. ಸದ್ಯ ಕುರುಕ್ಷೇತ್ರ ಚಿತ್ರದಲ್ಲಿರುವ ನಿಖಿಲ್ ಚುನಾವಣೆ ಘೋಷಣೆ ಆದ ನಂತರ ಪ್ರಚಾರಕ್ಕೆ ಧುಮುಕಲಿದ್ದಾರೆ.

ಈಗಾಗಲೇ ಬಿಎಸ್ಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿರುವ ಜೆಡಿಎಸ್, ಇದೀಗ ಪವನ್ ಕಲ್ಯಾಣ್ ಅವರನ್ನು ಕೂಡ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕರೆತಂದು ಆ ಮೂಲಕ ತೆಲುಗು ಭಾಷಿಕರು ಹೆಚ್ಚಾಗಿ ವಾಸ ಮಾಡುತ್ತಿರುವ ಪ್ರದೇಶಗಳ ಮತಪಡೆಯಲು ಕಸರತ್ತು ನಡೆಸಿದೆ. (ಎನ್.ಬಿ)

Leave a Reply

comments

Related Articles

error: