ಸುದ್ದಿ ಸಂಕ್ಷಿಪ್ತ

ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾಮಧೇಯ ಶವಗಳು ಪತ್ತೆ

ಮೈಸೂರು,ಮಾ.17 : ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅನಾಥ ಶವಗಳು ಪತ್ತೆಯಾಗಿದ್ದು ವಿವರ ಹೀಗಿದೆ.

ಪುರುಷ : ಎಫ್ ಟಿ ಎಸ್ ಸರ್ಕಲ್ ಬಸ್ ನಿಲ್ದಾಣ ಬಳಿ ಅನಾಮಧೇಯ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ. 40 ರಿಂದ 45 ವರ್ಷ ವಯೋಮಾನದವನಾಗಿದ್ದು, 6 ಅಡಿ ಎತ್ತರ, ಬಿಳಿ ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. .

ಮಹಿಳೆ : ಸುಭಾಷ್ ನಗರದ 1ನೇ ಮುಖ್ಯ ರಸ್ತೆ ಪಾರ್ಕ್ ಬಳಿ ಸುಮಾರು 45 ವರ್ಷದ ಅನಾಮಧೇಯ ಮಹಿಳೆಯ ಶವವು ಪತ್ತೆಯಾಗಿದೆ. ಆಕೆಯು ಅಂದಾಜು ಐದು ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಉದ್ದ ಮುಖವನ್ನು ಹೊಂದಿದ್ದಾಳೆ.

ಇವರ  ಬಗ್ಗೆ ಗುರುತು ಪತ್ತೆಯಾದಲ್ಲಿ ನರಸಿಂಹರರಾಜ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: