ಮೈಸೂರು

ಕನ್ನಡ ರಾಜ್ಯೋತ್ಸವ: ನ.30 ರಂದು ಪ್ರಶಸ್ತಿ ಪ್ರದಾನ ಸಮಾರಂಭ

ತಲಕಾಡು ಕದಂಬ ಸೈನ್ಯದಿಂದ ಕನ್ನಡ ರಾಜ್ಯೋತ್ಸವ ತಲಕಾಡು ಕದಂಬ ಸೇನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕದಂಬಸೈನ್ಯ ಅಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.

ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಲಕಾಡಿನ ಹಸ್ತಿಕೇರಿ ಮಠದಲ್ಲಿ ನ.30ರ ಬುಧವಾರ ಮಧ‍್ಯಾಹ್ನ 2:30ಕ್ಕೆ ಸಮಾರಂಭ ನಡೆಯಲಿದ್ದು ಪೌರಾಣಿಕ ಹಾಗೂ ಐತಿಹಾಸಿಕ ಸ್ಥಳವಾದ ತಲಕಾಡಿನಲ್ಲಿ ಪ್ರವಾಸಿಗರಿಗೆ ಸೂಕ್ತ ರೀತಿಯ ಮೂಲಭೂತ ವ್ಯವಸ್ಥೆಯಿಲ್ಲ. ಬನವಾಸಿ ಕದಂಬೋತ್ಸವದಂತೆ ತಲಕಾಡು ಉತ್ಸವವನ್ನು ಸರ್ಕಾರದ ಮಟ್ಟದಲ್ಲಿ ನಡೆಸಬೇಕು ಕನ್ನಡ ಕೀರ್ತಿ ಕಹಳೆಯನ್ನು ಮೆರೆಸಿದ ತಲಕಾಡು ಗಂಗರ ಸ್ಮರಣಾರ್ಥವಾಗಿ ತಲಕಾಡು ಗಂಗೋತ್ಸವ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಲಕಾಡು ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ರಚನೆ ಮಾಡಬೇಕೆಂದು  ಆಗ್ರಹಿಸಿದರು.

ರಾಜ್ಯಮಟ್ಟದ ಕದಂಬ ಸೇವಾರತ್ನ ಪ್ರಶಸ್ತಿ ಪ್ರದಾನ: ಸಮಾರಂಭವನ್ನು ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮಾ ಉದ್ಘಾಟಿಸುವರು. ಶ‍್ರೀರಂಗಪಟ್ಟಣದ ಬೇಬಿಮಠದ ತೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖ ಹನುಮಂತಪ್ಪ ಹಡಗದ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಅಧ್ಯಕ್ಷೆ ಎಂ. ಮಮತಾ ನರಸಿಂಹ ಮಾದನಾಯಕ ಧ್ವಜಾರೋಹಣ ನೆರವೇರಿಸುವರು ಎಂದು ತಿಳಿಸಿದರು.

ಇದೇ ಸಂದರ್ಭ ಸಮಾಜಸೇವಕ ಅಬ್ಬಾಸ್‍ಅಲಿ ಬೋಹ್ರಾರ ಅವರಿಗೆ ಕದಂಬ ರತ್ನ ಪ್ರಶಸ್ತಿ, ಕ.ಸಾ.ಪ. ಮಾಜಿ ಅಧ‍್ಯಕ್ಷ ಪ್ರೊ. ಹೆಚ್.ಎಸ್. ಮುದ್ದೇಗೌಡರಿಗೆ ಕದಂಬ ಪಂಪ ಪ್ರಶಸ್ತಿ ಹಾಗೂ ತಲಕಾಡು ಗಂಗಪ್ರಶಸ್ತಿಯನ್ನು ಶಾಸಕ ಪ್ರಿಯಕೃಷ್ಣರಿಗೆ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಉಪನಿರ್ದೇಶಕ ದಾಸೇಗೌಡ, ನಾ. ಮಾದೇಶ್ ಸ್ವಾಮಿ, ಕೆ.ರಾಜೇಶ್, ಭಗವಾನ್ ಹಾಗೂ ರಾಮೋಜಿರಾವ್ ಉಪಸ್ಥಿತರಿದ್ದರು.

Leave a Reply

comments

Related Articles

error: