ಕರ್ನಾಟಕ

‘ಅರಿವು’ ಯೋಜನೆಯಡಿ ವಿದ್ಯಾಭ್ಯಾಸ ಸಾಲಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು (ಮಾ.17): ಕರ್ನಾಟಕ ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತರಾದ ಮುಸಲ್ಮಾನರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್‍ರು ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ನಿಗಮವು ಅನುಷ್ಠಾನಗೊಳಿಸುತ್ತಿರುವ ‘ಅರಿವು’ ಯೋಜನೆಯಡಿ ವಿದ್ಯಾಭ್ಯಾಸ ಸಾಲವನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರಿವು (ಬೆಂಗಳೂರು) ನಡೆಸುವ  PGET   -2018 ಮೂಲಕ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಬಹುಸುವ ವಿದ್ಯಾರ್ಥಿಗಳು ನಿಗಮದ ವೆಬ್‍ಸೈಟ್ kmdc.kar.nic.in/arivu2  ಮೂಲಕ ‘ಆನ್‍ಲೈನ್’ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸುವ ಶುಲ್ಕದನ್ವಯ ನಿಗವು ವಿದ್ಯಾಭ್ಯಾಸ ಸಾಲವನ್ನು ಮುಂಚಿತವಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಂಜೂರು ಮಾಡಿ (pre-sanction the education loan  )ತದನಂತರ ಮಂಜೂರಾದ ಹಣವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವಿದ್ಯಾರ್ಥಿಗಳು ಆಯ್ಕೆಮಾಡಿಕೊಂಡ ಕಾಲೇಜಿಗೆ ನೇರವಾಗಿ ಪಾವತಿಸಲಾಗುವುದು.
PGET  -2018 ಸಂಖ್ಯೆ,  ‘ಆಧಾರ್ ಕಾರ್ಡ್’ ಸಂಖ್ಯೆ, ವಿಳಾಸ ಪುರಾವೆಗಾಗಿ ಮತರದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ (ವಾರ್ಷಿಕ ಆದಾಯವು ರೂ 6.00 ಗಳನ್ನು ಮೀರಿಬಾರದು),  ವಿದ್ಯಾರ್ಥಿಯ ಇ-ಮೇಲ್ ಐಡಿ, ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ ಗಳನ್ನು ಅರ್ಜಿ ಸಲ್ಲಿಸುವಾಗಿ ಎಲ್ಲಾ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು.
‘ಆನ್‍ಲೈನ್’ ಅರ್ಜಿಯನ್ನು ಏಪ್ರಿಲ್ 3 ರೊಳಗಾಗಿ ಸಲ್ಲಿಸಬೇಕು ಎಂದು  ಕರ್ನಾಟಕ ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ತಿಳಿಸಿದೆ. (ಎನ್.ಬಿ.)

Leave a Reply

comments

Related Articles

error: