ಕರ್ನಾಟಕಪ್ರಮುಖ ಸುದ್ದಿ

ಕೆಎಸ್‍ಆರ್‍ಟಿಸಿ: 726 ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು (ಮಾ.17): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ  ಒಟ್ಟು 726 ತಾಂತ್ರಿಕ ಸಹಾಯಕ (ದರ್ಜೆ-3 ಮೇಲ್ವಿಚಾರಕೇತರ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಮೀಸಲಾತಿ ವರ್ಗೀಕರಣವನ್ನು ವಿವರವಾಗಿ ವೆಬ್-ಸೈಟ್‍ನಲ್ಲಿ ಪ್ರಕಟಿಸಲಾಗಿದೆ.
ಸದರಿ ಹುದ್ದೆಗೆ ಆನ್-ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:5-4-2018 ರಿಂದ  ಅಂತಿಮ ದಿನಾಂಕ: 25-4-2018, ಸಮಯ 17:30 ರವರೆಗೆ ಅವಕಾಶ ಕಲ್ಪಿಸಲಾಗಿದೆ.  ಹಾಗೂ  ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕ:28-4-2018  ರವರೆಗೆ ಅವಕಾಶ ಇರುತ್ತದೆ.  ಅರ್ಜಿ ಸಲ್ಲಿಸಲು ಮತ್ತು ಆಯ್ಕೆ ವಿಧಾನಗಳ ಮಾಹಿತಿಯನ್ನು  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೆಬ್-ಸೈಟ್ www.ksrtcjobs.com  ನಲ್ಲಿ ಪಡೆಯಬಹುದು. (ಎನ್.ಬಿ)

Leave a Reply

comments

Related Articles

error: