ಸುದ್ದಿ ಸಂಕ್ಷಿಪ್ತ

ಕಾಣೆಯಾದ ಹೆಂಗಸಿನ ಪತ್ತೆಗಾಗಿ ಮನವಿ

ಮೈಸೂರು,ಮಾ.19:-  ಪಿರ್ಯಾದಿ ಟಿ.ಎಂ. ಗುರುಮಲ್ಲೇಶ್‍ರವರ ಬಾಮೈದುನನಾದ ನೇಮೇಶ್‍ರವರ ಮಗಳಾದ ಸುಮಾರು 25  ವರ್ಷದ ಮಹಿಳೆ ಅನ್ನಪೂರ್ಣ ಎಸ್.ಎನ್. ಎಂಬವರು ಮಾರ್ಚ್ 14ರಿಂದ ಕಾಣೆಯಾಗಿರುತ್ತಾರೆ ಎಂದು ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

ಮಹಿಳೆಯ ಗುರುತು 23 ವಯಸ್ಸು, ಎಣ್ಣೆಗೆಂಪು ಮೈ ಬಣ್ಣ, 5.3 ಅಡಿ ಎತ್ತರ, ಕನಕಾಂಬರ ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ದೃಢಕಾಯ ಶರೀರ, ದುಂಡು ಮುಖ, ಕನ್ನಡ ಮತ್ತು ಇಂಗ್ಲೀಷ್ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ಬಾಳ್ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418318 ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 2418339 ಅಥವಾ ಹೆಬ್ಬಾಳ್ ಪೊಲೀಸ್ ಠಾಣೆ ಇ-ಮೇಲ್- ಐಡಿ hebb…@ksp.gov.in ಇಲ್ಲಿಗೆ ತಿಳಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: