ಮೈಸೂರು

ಹಣ್ಣಿನ ಅಂಗಡಿ ಛಾವಣಿ ಶೀಟು ಸರಿಸಿ ಕಳ್ಳತನ ಪ್ರಕರಣ : ಇಬ್ಬರ ಬಂಧನ

ಮೈಸೂರು,ಮಾ.19:- ಹಣ್ಣಿನ ಅಂಗಡಿ ಛಾವಣಿ ಶೀಟುಗಳನ್ನು ಸರಿಸಿ ಮಳಿಗೆಯ ಒಳಗಿಳಿದು ಕಳ್ಳರು ನಗದು ದೋಚಿ ಪರಾರಿಯಾದ ಘಟನೆ ಅಗ್ರಹಾರದಲ್ಲಿ  ಮಾ.10ರಂದು ರಾತ್ರಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮೈಸೂರು ನಿವಾಸಿಗಳಾದ ರವಿ ಅಲಿಯಾಸ್ ಲೂಸ್ ಮಾದ, ದನುಷ್ ಅಲಿಯಾಸ್ ಡೈನಿ ಎಂದು ಗುರುತಿಸಲಾಗಿದ್ದು, ಇವರು ದೋಚಿದ್ದ ಹಣದಲ್ಲಿ 70,250ರೂ.ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರು ಮಾ.10ರ ರಾತ್ರಿ ಅಗ್ರಹಾರ ವೃತ್ತದಲ್ಲಿರುವ ಲೋಕೇಶ್ ಎಂಬವರಿಗೆ ಸೇರಿದ ಐಶ್ವರ್ಯಾ ಫ್ರೂಟ್ ಸ್ಟಾಲ್ ನ ಛಾವಣಿಯನ್ನು ಸರಿಸಿ ಒಳನುಗ್ಗಿ ಮಳಿಗೆಯಲ್ಲಿದ್ದ ಒಂದು ಲಕ್ಷಐದುಸಾವಿರರೂ.ನಗದನ್ನು ದೋಚಿದ್ದರು. ಲೋಕೇಶ್ ಮಾ.10ರಂದು ರಾತ್ರಿ 11ರ ಸುಮಾರಿಗೆ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಮರಳಿದ್ದರು. ಬೆಳಿಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು. ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಇನ್ಸಪೆಕ್ಟರ್ ಪ್ರಕಾಶ್, ಎಸ್ ಐ ಸುನಿಲ್, ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ಲಕ್ಷ್ಮಿನಾರಾಯಣ, ಸಿದ್ದರಾಜು, ವಿಷಕಂಠ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: