ಮೈಸೂರು

ಹೊನ್ನೇರು ಬಂಡಿ ಉತ್ಸವ

ಮೈಸೂರು,ಮಾ.19:- ಯುಗಾದಿ ಅಂಗವಾಗಿ  ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದ ಸೂರ್ಯಸಿಂಹಾಸನ ಮಠದಲ್ಲಿ ಹೊನ್ನೇರು ಬಂಡಿ ಉತ್ಸವ ಜರುಗಿತು.

ಭಾನುವಾರ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ವಿವಿಧ ಬಣ್ಣಗಳಿಂದ ಸಿಂಗಾರಗೊಂಡಿದ್ದ ಹೊನ್ನೇರು ಬಂಡಿಗೆ ಮಠದ ಶ್ರೀ ಸಿದ್ದಲಿಂಗಶಿವಚಾರ್ಯಸ್ವಾಮಿಜೀ ಚಾಲನೆ ನೀಡಿದರು. ಆನಂತರ ವಾದ್ಯಮೇಳ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಹೊನ್ನೇರು ಬಂಡಿಗೆ ಭಕ್ತರು ಸಗಣಿ ನೀಡಿದರು. ಆನಂತರ ಸಗಣಿಯನ್ನು ಜಮೀನುಗಳಿಗೆ ವಿಸರ್ಜಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: