ಲೈಫ್ & ಸ್ಟೈಲ್

ಚಳಿಗಾಲದಲ್ಲಿ ಪುರುಷರು ಅತಿ ಹೆಚ್ಚು ಕ್ಯಾಲರಿಯುಳ್ಳ ಆಹಾರವನ್ನೇ ಸೇವಿಸಿ

ಪುರುಷರ ಆಹಾರ ಸೇವನೆ ಮಹಿಳೆಯರಿಗಿಂತ ಭಿನ್ನವಾಗಿರುತ್ತದೆ. ಚಳಿಗಾಲದಲ್ಲಿ ಶರೀರದಲ್ಲಿ ಹೆಚ್ಚಿನ ಕ್ಯಾಲೋರಿಯುಕ್ತ ಆಹಾರ ಸೇವನೆಯ ಆವಶ್ಯಕತೆಯಿದೆ. ಅದರಲ್ಲೂ ಪುರುಷರು ಆರೋಗ್ಯವಂತರಾಗಿರಲು ಅತಿಹೆಚ್ಚು ಕ್ಯಾಲರಿಯುಳ್ಳ ಆಹಾರವನ್ನೇ ಸೇವಿಸಬೇಕು.

ಚಳಿಗಾಲದಲ್ಲಿ ಪುರುಷರು ಯಾವ ರೀತಿಯ ಆಹಾರ ಸೇವಿಸಬೇಕೆನ್ನುವ ಕುರಿತ ಮಾಹಿತಿ ಇಲ್ಲಿದೆ.

aacroot-webಆಕ್ರೋಟ್ : ಇದರಲ್ಲಿರುವ ಓಮೆಗಾ 3 ಆ್ಯಸಿಡ್ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಪ್ರತಿದಿನ 75ಗ್ರಾಂ ಆಕ್ರೋಟ್ ಸೇವಿಸುವುದರಿಂದ ವೀರ್ಯಾಣು ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡು ಬರಲಿದೆ.

ಮೊಟ್ಟೆ : ಮೊಟ್ಟೆಯಲ್ಲಿ ಪ್ರೋಟೀನ್, ಕ್ಯಾಲ್ಶಿಯಂ ಮತ್ತು ಕಬ್ಬಿಣದ  ಅಂಶವಿರುತ್ತದೆ. ಚಳಿಯ ದಿನಗಳಲ್ಲಿ ಇದು ಶರೀರವನ್ನು ಬೆಚ್ಚಗಿರಿಸುತ್ತದಲ್ಲದೇ, ಶಕ್ತಿಯನ್ನು ನೀಡುತ್ತದೆ. ಅದರಿಂದ ಪ್ರತಿದಿನ ಬೆಳಗಿನ ಉಪಹಾರದಲ್ಲಿ ಎರಡು ಬೇಯಿಸಿದ ಮೊಟ್ಟೆಯನ್ನು ಸೇವಿಸಿ.egg-web

ದಾಳಿಂಬೆ : ಇದರಲ್ಲಿ ಆ್ಯಕ್ಸಿಡೆಂಟ್ಸ್ ಗಳಿವೆ. ವೃದ್ಧಾಪ್ಯ ಆವರಿಸದಂತೆ ತಡೆಯುತ್ತದೆ. ಪುರುಷರಲ್ಲಿನ ಫಲವಂತಿಕೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಒಂದು ದಾಳಿಂಬೆ ಸೇವಿಸಿ ಅಥವಾ ಜ್ಯೂಸ್ ಕುಡಿಯಿರಿ.pomogranate-web

ನೆಲ್ಲಿಕಾಯಿ : ಇದರಲ್ಲಿ ಕಬ್ಬಿಣ ಮತ್ತು ವಿಟಾಮಿನ್ ಸಿ ಅಂಶವಿರುತ್ತದೆ. ವೃದ್ಧಾಪ್ಯವನ್ನು ತಡೆಯುತ್ತದೆ. ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.  ಪ್ರತಿದಿನ ನೆಲ್ಲಿಕಾಯಿಯ ಲೇಹ್ಯ ಬೆಳಿಗ್ಗೆ -ಸಂಜೆ ಸೇವಿಸಿ, ಅಥವಾ ಒಂದು ಚಮಚ ನೆಲ್ಲಿಕಾಯಿಯ ರಸವನ್ನಾದರೂ ಕುಡಿಯಿರಿ.nelli-web

ಕ್ಯಾರೆಟ್ : ಇದರಲ್ಲಿರುವ ವಿಟಾಮಿನ್ ಗಳು ಮತ್ತು ಆ್ಯಂಟಿಆ್ಯಕ್ಸಿಡೆಂಟ್ಸ್ ಗಳು ಆರೋಗ್ಯವನ್ನು ಉತ್ತಮವಾಗಿರಿಸುತ್ತವೆ. ತ್ವಚೆಯು ಅಂದವಾಗಿರುತ್ತದೆ. ವೀರ್ಯಾಣು ಹೆಚ್ಚಳವಾಗುತ್ತದೆ. ಪ್ರತಿದಿನ ಹಸಿಯಾದ ಒಂದು ಕ್ಯಾರೆಟ್ ತಿನ್ನಿ ಅಥವಾ ಜ್ಯೂಸ್ ಕುಡಿಯಿರಿ.caret-web

ಸೀಬೆಹಣ್ಣು : ಇದರಲ್ಲಿ ವಿಟಾಮಿನ್ ಸಿ ಹೇರಳವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಹಣ್ಣಾದ ಸೀಬೆಹಣ್ಣನ್ನು ಸ್ವಲ್ಪ ಉಪ್ಪಿನೊಂದಿಗೆ ಸೇವಿಸಿ.guava-benefits-625_625x350_71447741866

ಸೇಬು : ಇದರಲ್ಲಿ ಹೇರಳವಾಗಿ ವಿಟಾಮಿನ್ ಗಳು ಮಿನರಲ್ಸ್ ಗಳಿದ್ದು ಚಳಿಗಾಲದಲ್ಲಿ ಇದರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಕೆಲವು ಅಂಶಗಳು ಮನಸ್ಸನ್ನು ಶುಭ್ರವಾಗಿರಿಸುತ್ತದೆ.apple-web

ಖರ್ಜೂರ : ಇದರಲ್ಲಿರುವ ವಿಟಾಮಿನ್ ಮತ್ತು ಮಿನರಲ್ಸ್ ಗಳು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತವೆ. ಕಣ್ಣಿನ ದೃಷ್ಟಿಯು ಮಂದವಾಗುವುದನ್ನು ತಡೆಯುತ್ತದೆ. ರಾತ್ರಿ ಒಂದು ಗ್ಲಾಸ್ ಬಿಸಿಹಾಲಿಗೆ ಐದು ಖರ್ಜೂರ ಹಾಕಿ ಕುಡಿಯಿರಿ.12-1468315329-dates1-31-1464679471

ದ್ರಾಕ್ಷಿ : ದ್ರಾಕ್ಷಿಯಲ್ಲಿ ಆ್ಯಂಟಿಆ್ಯಂಕ್ಸಿಡೆಂಟ್ಸ್ ಗಳು ಹೇರಳವಾಗಿವೆ. ತ್ವಚೆಯನ್ನು ಕೋಮಲವಾಗಿಸಿ, ಸುಕ್ಕುಗಟ್ಟುವುದನ್ನು ತಡೆಯುತ್ತದೆ. ದಿನಾಲೂ ಒಂದು ಮುಷ್ಟಿ ದ್ರಾಕ್ಷಿ ಸೇವಿಸಿ ಅಥವಾ ಜ್ಯೂಸ್ ಕುಡಿಯಿರಿ.images-5

ಇವುಗಳನ್ನು ಪ್ರತಿನಿತ್ಯ ಸೇವಿಸಿದಲ್ಲಿ ನೀವು ಆರೋಗ್ಯಪೂರ್ಣರಾಗಿ ನಳನಳಿಸುತ್ತಿರುತ್ತೀರಿ.

Leave a Reply

comments

Related Articles

error: