ಕರ್ನಾಟಕ

ವಿದ್ಯಾರ್ಥಿಗಳು ಜೀವನದ ಮಹತ್ವ ಅರಿಯಬೇಕು : ಡಾ.ದಯಾನಂದ ಸಲಹೆ

ರಾಜ್ಯ(ಮಡಿಕೇರಿ) ಮಾ.20 :- ವಿದ್ಯಾರ್ಥಿಗಳು ಸ್ಮಾರ್ಟ್ ಪೋನ್ ಮತ್ತು ಸೆಲ್ಫಿಯಿಂದ ನಿಜವಾದ ಸ್ಮಾರ್ಟ್ ಜೀವನವನ್ನೇ ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಸಮಯವನ್ನು ವ್ಯಯ ಮಾಡದೇ ಬದುಕಿನ ಕಡೆ ಗಮನಕೊಡಿ ಎಂದು ಮಂಗಳೂರು ವಿವಿಯ ಹಣಕಾಸು ಅಧಿಕಾರಿಗಳಾದ ಡಾ. ದಯಾನಂದ ಹೇಳಿದರು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳ ಬದುಕಿನಲ್ಲಿ ಭರವಸೆ ಇರಬೇಕು ಹಾಗಾದರೆ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶವನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೆಚ್ಚೆಚ್ಚು ಪುಸ್ತಕ ಓದಿ ಉನ್ನತ ಸ್ಥಾನಕ್ಕೆ ತಲುಪಬೇಕು. ಬಡತನದಲ್ಲಿ ಓದಿದ ಏಷ್ಟೋ ಮಹಾನಿಯರು ಸಾಧನೆ ಮಾಡಿದ್ದಾರೆ. ಅವರಲ್ಲಿ ಎಪಿಜೆ ಅಬ್ದುಲ್ ಕಲಾಂ ಸಾಧನೆ ಅಪಾರವಾದದ್ದು ಎಂದು ಡಾ.ದಯಾನಂದ ಹೇಳಿದರು. ಸುಂದರವಾದ ಸ್ಮಾರ್ಟ್‍ಪೋನಿನಿಂದ ಸುಂದರವಾದ ಕನಸುಗಳು ನಾಶವಾಗುತ್ತಿವೆ. ವಿದ್ಯಾರ್ಥಿಗಳು ಕಷ್ಟದಿಂದಲ್ಲೇ ಓದಿದರೆ ಖಂಡಿತ ಬೆಳಕು ಸಿಗುತ್ತೆ. ಹಾಗೆಯೇ ಜೀವನ ಎಂಬ ಕ್ರಿಕೆಟ್‍ನಲ್ಲಿ ಅವಕಾಶ ಸಿಕ್ಕಾಗ ಚಂಡನ್ನು ಉತ್ತಮವಾಗಿ ಬಾರಿಸಬೇಕು. ಜೀವನ ಎಂಬುದು ಕಲ್ಲು ಮುಳ್ಳಿನ ಹಾದಿ, ಅದನ್ನು ದಾಟಿಬಂದಾಗ ಮಾತ್ರ ಜೀವನ ಸುಂದರವಾಗಿರುತ್ತದೆ ಎಂದು ಅವರು ತಿಳಿಸಿದರು. ಸೌರಭ ಕಲಾ ಪರಿಷತ್ತಿನ ನಿರ್ದೇಶಕರಾದ ಶ್ರೀವಿದ್ಯಾ ಮುರುಳೀಧರ ಅವರು ಮಾತನಾಡಿ ಸಾಹಿತ್ಯ ಬರೆಯಲು ಪ್ರೇರಣೆಯಾಗಿದ್ದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಎಂದು ಬಣ್ಣಿಸಿದರು.   ಸಾಧನೆ ಮಾಡಲು ಮನಸು ಮುಖ್ಯ. ಮನಸಿದ್ದರೇ ಮಾರ್ಗ, ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತನ್ನಿ ಇಂದು ಇಂಗ್ಲಿಷ್ ತುಂಬ ಅವಶ್ಯಕವಾಗಿದೆ ಕಲಿತುಕೊಳ್ಳಿ ಎಂದು ಅವರು ತಿಳಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪಾರ್ವತಿ ಅಪ್ಪಯ್ಯ  ಸಹಪಠ್ಯ ಚಟುವಟಿಕೆ ಸಲಹೆಗಾರರು ಮತ್ತು ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ.ಗಾಯಿತ್ರಿ ಎ.ಎನ್. ವಿದ್ಯಾರ್ಥಿ ಸಂಘದ ಸಲಹೆಗಾರರಾದ ಡಾ.ಶ್ರೀಧರ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: