
ಕರ್ನಾಟಕ
ನಾಪೋಕ್ಲುವಿನಲ್ಲಿ ಶ್ರೀಭಗವತಿ ದೇವಾಲಯದ ವಾರ್ಷಿಕ ಹಬ್ಬ
ರಾಜ್ಯ(ಮಡಿಕೇರಿ) ಮಾ.20:- ನಾಪೋಕ್ಲುವಿನ ಶ್ರೀಭಗವತಿ ದೇವಾಲಯದ ವಾರ್ಷಿಕ ಹಬ್ಬ ಸಂಭ್ರಮದಿಂದ ಜರುಗಿತು. ಸೋಮವಾರ ಮಧ್ಯಾಹ್ನ ದೇವಾಲಯದಲ್ಲಿ ಎತ್ತು ಪೋರಾಟ ನಡೆದ ನಂತರ ಗ್ರಾಮಸ್ಥರಿಂದ ಬೊಳ್ಕಾಟ್ ಜರುಗಿತು.
ದೇವರ ವಿಗ್ರಹ ಹೊತ್ತು ನೃತ್ಯ ಬಲಿ ಮತ್ತು ಮಹಾಪೂಜೆ, ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. (ಕೆಸಿಐ,ಎಸ್.ಎಚ್)