ಮೈಸೂರು

15 ಗ್ರಾಂ ಚಿನ್ನದ ಸರ ಮತ್ತು ಒಂದು ಮೊಬೈಲ್ ಫೋನ್ ಕಿತ್ತುಕೊಂಡು ಹೋಗಿದ್ದ ಆರೋಪಿಗಳಿಗೆ 2ವರ್ಷ ಜೈಲು

ಮೈಸೂರು,ಮಾ.20:- 31/07/2015 ರಂದು ಮೈಸೂರು ನಗರ ಗೋಕುಲಂ 3ನೇ ಹಂತ, 2ನೇ ಮುಖ್ಯ ರಸ್ತೆಯಲ್ಲಿ ಫೋನ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಹುಡುಗಿಯ ಕತ್ತಿನಿಂದ 15 ಗ್ರಾಂ ಚಿನ್ನದ ಸರ ಮತ್ತು ಒಂದು ಮೊಬೈಲ್ ಫೋನ್ ಕಿತ್ತುಕೊಂಡು ಹೋಗಿದ್ದ ಕುರಿತು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಸಂಬಂಧ ವಿ.ವಿ. ಪುರಂ ಪೊಲೀಸರು ಆರೋಪಿಗಳನ್ನು ಬಂಧಿಸಿ,ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು

ಕಲ್ಯಾಣಗಿರಿ ಕೆ.ಹೆಚ್.ಬಿ. ಕಾಲೋನಿಯ ಆದಿಲ್ ಪಾಷ ಅಲಿಯಾಸ್ ಆದಿಲ್ ಬಿನ್ ಅನ್ವರ್ ಪಾಷ,(25), ಶಾಂತಿ ನಗರದ ಸೈಯದ್ ಅಲೀಂ ಅಲಿಯಾಸ್ ಅಲೀಂ ಬಿನ್ ಪತ್ತೆ ಮಹ್ಮದ್,(24) ಇವರನ್ನು ಪೊಲೀಸರು ಬಂಧಿಸಿದ್ದರು. ಇವರು ಕದ್ದ ಪದಾರ್ಥಗಳನ್ನು ಅಮಾನತ್ತುಪಡಿಸಿಕೊಂಡು, ಎಲ್ಲಾ ಅವಶ್ಯಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಈ ಪ್ರಕರಣವನ್ನು ಮೈಸೂರಿನ 4ನೇ ಎ.ಎಫ್.ಎಂ., ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ತಮ್ಮಣ್ಣರವರ ಉತ್ತಮ ವಾದ ಮಂಡನೆಯ ಹಿನ್ನೆಲೆಯಲ್ಲಿ ಆರೋಪಿತರ ಆರೋಪವು ಸಾಬೀತಾಗಿದ್ದು, ನ್ಯಾಯಾಲಯವು  ಮಾರ್ಚ್ 17 ಇಬ್ಬರು ಆರೋಪಿಗಳಿಗೆ 2 ವರ್ಷಗಳ ಕಠಿಣ  ಕಾರಾಗೃಹ ವಾಸ ಮತ್ತು 5000 ರೂ. ದಂಡ, ದಂಡ ಕಟ್ಟದಿದ್ದಲ್ಲಿ 2 ತಿಂಗಳು ಸಾದಾ ಶಿಕ್ಷೆ ವಿಧಿಸಿರುತ್ತದೆ.  ಈ ಪ್ರಕರಣದಲ್ಲಿ ಎಲ್ಲಾ ಅವಶ್ಯಕ ಸಾಕ್ಯ್ಯಾಧಾರಗಳನ್ನು ಸಂಗ್ರಹಿಸಿ, ಉತ್ತಮ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ್ದ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ ವಿ.ವಿ.ಪುರಂ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ವಿ. ರವಿ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಎ. ಸುಬ್ರಮಣ್ಯೇಶ್ವರ ರಾವ್ ಪ್ರಶಂಸಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: