ಕರ್ನಾಟಕಪ್ರಮುಖ ಸುದ್ದಿ

ಪಿ.ಯು ಇಂಗ್ಲೀಷ್ ಪ್ರಶ್ನೆಪತ್ರಿಕೆ ದೋಷ: ಕೃಪಾಂಕ ನೀಡುವಂತೆ ವಿದ್ಯಾರ್ಥಿಗಳ ಆಗ್ರಹ

ಬೆಂಗಳೂರು (ಮಾ.20): ಪಿಯು ಪ್ರಶ್ನೆ ಪತ್ರಿಕೆಯಲ್ಲಿ ದೋಷ ಕಂಡುಬಂದಿರುವ ಕಾರಣ ಆಗಿರುವ ಅನ್ಯಾಯವನ್ನು ಕೃಪಾಂಕ ನೀಡಿ ಸರಿಪಡಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಆಗ್ರಹಿಸಿದ್ದಾರೆ.

ಬಹಳ ಲೋಪದೋಷಗಳಿಂದ ಕೂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಉತ್ತರಿಸಲು ಪರದಾಡುವಂತಾಗಿದೆ. ಇದು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಕೃಪಾಂಕ ನೀಡಿ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

ಮಾ.17ರಂದು ನಡೆದಿದ್ದ ಇಂಗ್ಲಿಷ್ ಭಾಷಾ ವಿಷಯ ಪ್ರಶ್ನೆಪತ್ರಿಕೆಯ ಶೇ.30ಕ್ಕಿಂತ ಹೆಚ್ಚಿನ ಪ್ರಶ್ನೆಗಳು ವ್ಯಾಕರಣ ದೋಷದಿಂದ ಕೂಡಿತ್ತು. ಪ್ರಶ್ನೆಗಳೇ ಅರ್ಥವಾಗಿಲ್ಲವೆಂದು ಎಂಬುದು ವಿದ್ಯಾರ್ಥಿಗಳ ಅಳಲು.(ಎನ್.ಬಿ)

Leave a Reply

comments

Related Articles

error: