ಮೈಸೂರು

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಗೆ ಡಾ.ಭಾರ್ಗವಿ ಹೆಮ್ಮಿಗೆ

ಮೈಸೂರು,ಮಾ.20:- ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಗೆ ಮೈಸೂರಿನ ಮಹಾಜನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಭಾರ್ಗವಿ ಹೆಮ್ಮಿಗೆ ಅವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ಸರ್ಕಾರ ನಿಯೋಜಿಸಿದೆ.

ಡಾ.ಭಾರ್ಗವಿ ಹೆಮ್ಮಿಗೆ ಎಸ್ ಬಿಬಿಆರ್ ಮಹಾಜನ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಎಲ್ಲರಿಗೂ ಚಿರಪರಿಚಿತರಾಗಿರುವ ಸ್ವಾತಂತ್ರ್ಯ ಹೋರಾಟಗಾರ ವೇದಾಂತ ಹೆಮ್ಮಿಗೆ ಅವರ ಸೊಸೆ.

Leave a Reply

comments

Related Articles

error: