ಸುದ್ದಿ ಸಂಕ್ಷಿಪ್ತ
ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ : ತರಬೇತಿ ಕಾರ್ಯಾಗಾರ
ಮೈಸೂರಿನ ವಿ-ಲೀಡ್ನಲ್ಲಿ, ವಿವೇಕಾನಂದ ನಾಯಕತ್ವ ಅಭಿವೃದ್ಧಿ ಸಂಸ್ಥೆಯಿಂದ “ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ” ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ನ.28ರಿಂದ ಡಿ.10ರವರೆಗೆ ಎರಡು ವಾರಗಳ ಕಾಲ ಕಾರ್ಯಾಗಾರ ನಡೆಯಲಿದ್ದು ನ.28ರ ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಲಾಗುವುದು, ಎಸಿಐಡಬ್ಲ್ಯುಆರ್ಎಮ್ ನ ಮಾಧವ, ತಾಂತ್ರಿಕ ನಿರ್ದೇಶಕ ಡಾ.ಪಿ.ಸೋಮಶೇಖರ್ ರಾವ್ ಉಪಸ್ಥಿತರಿರುವರು, ಸ್ವಾಮಿ ವಿವೇಕಾನಂದ ಯುವ ಚುಳುವಳಿಗಾರ ಡಾ.ಎಂ.ಎ.ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ತಜ್ಞರೊಂದಿಗೆ ಸಮಲೋಚನೆಯನ್ನು ಏರ್ಪಡಿಸಲಾಗಿದೆ.