ಸುದ್ದಿ ಸಂಕ್ಷಿಪ್ತ
ನಾಳೆ ವಿಶ್ವಗೊಂಬೆಯಾಟ ದಿನಾಚರಣೆ
ಮೈಸೂರು,ಮಾ.20 : ವಿಶ್ವಗೊಂಬೆಯಾಟ ದಿನಾಚರಣೆಯನ್ನು ನಾಳೆ ಬೆಳಗ್ಗೆ 11.30ಕ್ಕೆ ಸಂತ ಜೋಸೆಫರ್ ಕಾಲೇಜು ಸಭಾಂಗಣದಲ್ಲಿ ಸಾಹಿತಿ ಪ್ರೊ.ಸಿ.ಪಿ.ಸಿದ್ಧಾಶ್ರಮ ಉದ್ಘಾಟಿಸುವರು. ಪ್ರಾಂಶುಪಾಲೆ ಡಾ.ವಿ.ನಿವೇದಿತಾ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಡಾ.ಬಿ.ಟಿ.ಬಾಣೇಗೌಡ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಸಂಚಾಲಕರಾದ ಡಾ.ಕನಕತಾರ, ಗಣೇಶ ಕುಮಾರಸ್ವಾಮಿ ಇನ್ನಿತರರು ಇರುವರು. ನಂತರ ಸೂತ್ರದ ಗೊಂಬೆಯಾಟ ಪ್ರದರ್ಶನ ನಡೆಯುವುದು. (ಕೆ.ಎಂ.ಆರ್)