ಸುದ್ದಿ ಸಂಕ್ಷಿಪ್ತ
ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೈಸೂರು,ಮಾ.20 : ಸುಯೋಗ ಆಸ್ಪತ್ರೆಯಿಂದ ‘ದಿ.ಪುಟ್ಟೇಗೌಡರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾ.21ರ ಬೆಳಗ್ಗೆ 10 ಗಂಟೆಯಿಂದ ಸಾಲಿಗ್ರಾಮದ ರಾಮನಾಥಪುರ ರಸ್ತೆಯ ಹಳೆ ಸಾರಾ ಕಾನ್ವಂಟ್ ನಲ್ಲಿ ಆಯೋಜಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ಅಪರ ನಿರ್ದೇಶಕ ಡಾ.ಡಿ.ತಿಮ್ಮಯ್ಯ ಅಧ್ಯಕ್ಷತೆ, ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸುವರು, ಡಾ.ಮಳಲಿ ವಸಂತಕುಮಾರ್, ಮೆಸ್ಕೊ ಪ್ರಾಂಶುಪಾಲ ಪ್ರೊ.ಎಂ.ಕಲಿಂ ಅಹಮ್ಮದ್ ಇರುವರು. (ಕೆ.ಎಂ.ಆರ್)