
ಮೈಸೂರು
ಬೆಟ್ಟದೂರಿನ ಬಾಹುಬಲಿಗೆ ಮಸ್ತಕಾಭಿಷೇಕ
600 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಜಿಲ್ಲೆಯ ಹುಣಸೂರು ಬಳಿಯ ಬಿಳಿಕೆರೆ ಹೋಬಳಿಯ ಬೆಟ್ಟದೂರು ಗೊಮ್ಮಟಗಿರಿಯಲ್ಲಿ 16 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಭಾನುವಾರ ಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯಿತು.
200ಅಡಿ ಎತ್ತರದ ಬಂಡೆಯಲ್ಲಿ ವಿರಾಜಮಾನನಾದ ಏಕಶಿಲಾ ಬಾಹುಬಲಿ ಮೂರ್ತಿಗೆ ಮಂಗಲ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಲಾಯಿತು.
ಕ್ಷೀರ, ಚಂದನ, ಶ್ರೀಗಂಧ, ಅರಿಶಿನ, ಜೇನುತುಪ್ಪ, ತುಪ್ಪ, ಸಕ್ಕರೆ, ಮೊಸರು, ಎಳನೀರು, ಒಣದ್ರಾಕ್ಷಿ, ಪುಷ್ಪ, ಸೇರಿದಂತೆ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಲಾಯಿತು. ಹೊಂಬುಜಾ ಮಠದ ದೇವೇಂದ್ರ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.