ಕರ್ನಾಟಕ

ಕೆಎಸ್‍ಆರ್‍ಟಿಸಿ ಶಿಶಿಕ್ಷು ತರಬೇತಿ ನಿಯೋಜನೆ: ನೇರ ಸಂದರ್ಶನ

ಮಂಡ್ಯ (ಮಾ.20): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡ್ಯ ವಿಭಾಗದಲ್ಲಿ ಶಿಶಿಕ್ಷು ತರಬೇತಿಗೆ ಖಾಲಿ ಇರುವ ತಾಂತ್ರಿಕ ವೃತ್ತಿಗಳಿಗೆ ಐ.ಟಿ.ಐನಲ್ಲಿ ಡೀಸಲ್ ಮೆಕಾನಿಕ್, ಎಲೆಕ್ಟ್ರೀಕಲ್ ಎಲೆಕ್ಟ್ರಾನಿಕ್ಸ್ ಮೆಕಾನಿಕಲ್ ಮೆಕಕ್ಟ್ರೋನಿಕ್ಸ್, ಎಂ.ವಿ.ಬಿ.ಬಿ, ಹಾಗೂ ವೆಲ್ಡರ್ (ಗ್ಯಾ& ಎ) ವೃತ್ತಿಗಳಲ್ಲಿ ತೇರ್ಗಡೆ ಹೊಂದಿರುವ ಹಾಗೂ ಪಾಸಾ ವೃತ್ತಿಗಳಿಗೆ ಪಿಯುಸಿ (ವಿಜ್ಞಾನ ಅಥವಾ ವಾಣಿಜ್ಯ) ಮತ್ತು ಐ.ಟಿ.ಐನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ನಿಯೋಜಿಸಿಕೊಳ್ಳಲು ಮಾರ್ಚ್ 21 ಬೆಳಿಗ್ಗೆ 11 ಗಂಟೆಗೆ ಮಂಡ್ಯ ವಿಭಾಗೀಯ ಕಾರ್ಯಗಾರ ಶುಗರ್ ಫ್ಯಾಕ್ಟರಿ ಸರ್ಕಲ್ ಹತ್ತಿರ ಮಂಡ್ಯ ಘಟಕದ ಆವರಣ, ಮಂಡ್ಯದಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಮಂಡ್ಯ ವಿಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: