ಕರ್ನಾಟಕ

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ 200 ಶುಶ್ರೂಷಕರ ನಿಯೋಜನೆ ಕೋರಿ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು (ಮಾ.21): ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಅಂತಿಮ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಗುಣಾತಮ್ಕವಾದ ಚಿಕಿತ್ಸೆಯನ್ನು ನೀಡುವುದರಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿರುವ ಆಸ್ಪತ್ರೆಯಾಗಿರುತ್ತದೆ. ಗುಣಾತ್ಮಕವಾದ ಚಿಕಿತ್ಸೆಯನ್ನು ನೀಡುವುದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೊದಲ ಆದ್ಯತೆಯಾಗಿರುತ್ತದೆ. ಶುಶ್ರೂಷಾ ಮತ್ತು ಅರೆ ವೈದ್ಯಕೀಯ ಸೇವೆಯನ್ನು ಒದಗಿಸುವುದು ಒಂದು ಮುಖ್ಯವಾದ ಪಾತ್ರವಾಗಿದ್ದು ರೋಗಿಗಳಿಗೆ ಗುಣಾತ್ಮಕವಾದ ಚಿಕಿತ್ಸೆಯನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ.

ಈ ಸಂಸ್ಥೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿ ಶೇಕಡಾ 80 ರಷ್ಟು ಸಮಾಜದ ಕೆಳಸ್ಥರದವರಾಗಿದ್ದು, ಕ್ಯಾನ್ಸರ್ ಚಿಕಿತ್ಸೆಗಾಗಿ ಕಿದ್ವಾಯಿ ಸಂಸ್ಥೆಯನ್ನೇ ಅವಲಂಬಿಸಬೇಕಾಗಿರುತ್ತದೆ. ಹಿಂದೆ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ತರಬೇತಿ ಶುಶ್ರೂಷಕರು, ಮತ್ತು ತರಬೇತಿ ಅರೆ-ವೈದ್ಯಕೀಯ ಸಿಬ್ಬಂದಿಯನ್ನು ಅವರ ಅರ್ಹತೆಯನ್ನು ಪರಿಶಿಲಿಸದೇ ತಾತ್ಕಾಲಿಕವಾಗಿ ನೇಮಕಾತಿ ಮಾಡಲಾಗಿರುತ್ತದೆ.

ಈ ರೀತಿ ನೇಮಕಾತಿ ಹೊಂದಿರುವ ಬಹುತೇಕ ತರಬೇತಿ ಸುಶ್ರೂಷಕ/ಅರೆ-ವೈದ್ಯಕೀಯ ಸಿಬ್ಬಂದಿಗಳು ಗುಣಾತ್ಮಕವಾದ ಚಿಕಿತ್ಸೆಯನ್ನು ನೀಡಲು ಅವಶ್ಯಕವಾದ ತಾಂತ್ರಿಕ ಕೌಶಲ್ಯವನ್ನು ಹೊಂದಿರುವುದಿಲ್ಲವೆಂಬ ಅಂಶ ಕಂಡು ಬಂದಿದೆ. ಅಲ್ಲದೇ, ಈ ರೀತಿ ನೇಮಕಾತಿ ಹೊಂದಿದ ಬಹುತೇಕ ಅರೆ-ವೈದ್ಯಕೀಯ ಸಿಬ್ಬಂದಿಗಳು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ವೃಂದ ಮತ್ತು ನೇಮಕಜಾತಿ ನಿಯಮಗಳನ್ವಯ ವಿದ್ಯಾರ್ಹತೆಯನ್ನು ಹೊಂದಿಲ್ಲದಿರುವುದು ಸಹ ಕಂಡು ಬಂದಿದೆ. ಆದುದರಿಂದ, ಶುಶ್ರೂಷಕ ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗಳನ್ನು ಅವರ ಅರ್ಹತೆಯನ್ನು ಪರಿಶೀಲಿಸಿ ಕರ್ನಾಟಕ ರಾಜ್ಯ ಪ್ಯಾರಾ-ಮೆಡಿಕಲ್ ಬೋರ್ಡ್ ಮುಖಾಂತರ ತಾತ್ಕಾಲಿಕವಾಗಿ ನೇಮಕಾತಿ ಮಾಡುವುದು ಸೂಕ್ತವೆಂದು ನಿರ್ಧರಿಸಲಾಗಿದೆ.

ಈ ಸಂಬಂಧವಾಗಿ 150 ತರಬೇತಿ ಶುಶ್ರೂಷಕರುಗಳನ್ನು ಮತ್ತು 34 ತರಬೇತಿ ತಂತ್ರಜ್ಞರುಗಳ ಸೇವೆಯನ್ನು ಪಡೆಯಲು ದಿನಾಂಕ: 9-3-2018 ರಂದು ಅಧಿಸೂಚನೆಯನ್ನು ಹೊರಡಿಲಾಗಿರುತ್ತದೆ. ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತರಬೇತಿ ಶುಶ್ರೂಷಕರು ಮತ್ತು ತರಬೇತಿ ತಂತ್ರಜ್ಞರುಗಳು ದಿನಾಂಕ: 13-03-2018 ರಂದು ಹಠಾತ್ತನೆ ಮುಷ್ಕರವನ್ನು ಪ್ರಾರಂಭಿಸಿರುತ್ತಾರೆ.

ಯಾವುದೇ ತರಬೇತಿ ಶುಶ್ರೂಷಕರು ಮತ್ತು ತರಬೇತಿ ತಂತ್ರಜ್ಞರುಗಳನ್ನು ಬಿಡುಗಡೆಗೊಳಿಸಿರುವುದಿಲ್ಲ ಅಥವಾ ತೆಗೆದು ಹಾಕಿರುವದಿಲ್ಲವಾದ್ದರಿಂದ, ಅವರುಗಳು ಪ್ರಾರಂಭಿಸಿರುವ ಮುಷ್ಕರಕ್ಕೆ ಯಾವುದೇ ಕಾರಣಗಳು ಇರುವುದಿಲ್ಲ. ಆದರೂ, ಈ ರೀತಿಯ ಮುಷ್ಕರಗಳು ಆಗಾಗ್ಗೆ ಜರುಗುತ್ತಲಿವೆ. ಎರಡು ತಿಂಗಳಿನಿಂದೀಚೆಗೆ ಇದು ಅವರ ಎರಡನೇ ಮುಷ್ಕರವಾಗಿರುತ್ತದೆ.

ಆರೋಗ್ಯ ಸೇವೆ ಒದಗಿಸುವ ಬಹು ಮುಖ್ಯವಾದ ಮತ್ತು ಅವಶ್ಯಕವಾದ ಸೇವೆಯಾಗಿರುತ್ತದೆ. ಈ ರೀತಿಯ ಮುಷ್ಕಗಳು ಕಾನೂನು ಬಾಹಿರವಾಗಿರುವುದರ ಜೊತೆಗೆ ರೋಗಿಗಳ ಆರೈಕೆಯ ಮೇಲೆ ಗಣನೀಯವಾದ ಪರಿಣಾಮವನ್ನು ಬೀರುತ್ತವೆ. ಇತ್ತೀಚೆಗೆ ಜರುಗಿದ ಸಂಸ್ಥೆಯ ಆರ್ಥಿಕ ಸಮಿತಿಯು ತರಬೇತಿ ಶುಶ್ರೂಷಕರ ಮತ್ತು ತಂತ್ರಜ್ಞರುಗಳ ಶಿಷ್ಯ ವೇತನವನ್ನು ದಿನಾಂಕ: 1-4-2018 ರಿಂದ ಹೆಚ್ಚಿಸಲು ನಿರ್ಧರಿಸಿದ್ದಾಗ್ಯೂ, ತರಬೇತಿ ಶುಶ್ರೂಷಕರುಗಳು ಮತ್ತು ತರಬೇತಿ ತಂತ್ರಜ್ಞರುಗಳು ಪ್ರತಿಭಟನೆಗೆ ಇಳಿದಿರುತ್ತಾರೆ.

ಈ ಮುಷ್ಕರದ ಹಿನ್ನೆಲೆಯಲ್ಲಿ ಅಹರ್ನಿಶಿ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು ಸರ್ಕಾರದ ಸಂಸ್ಥೆಗಳಿಂದ ಮತ್ತು ಶುಶ್ರೂಷಕ ಮಹಾವಿದ್ಯಾಲಯಗಳಿಂದ ಅಗತ್ಯವಾದ ಶುಶ್ರೂಷಕರನ್ನು ಪಡೆಯಲು ಬೇಡಿಕೆಯನ್ನು ಸಲ್ಲಿಸಿದ್ದು, ಅವರ ಸೇವೆಯನ್ನು ಪಡೆದು ನಿರಂತವಾದ ಮತ್ತು ಸಂಪೂರ್ಣವಾದ ರೋಗಿಗಳ ಆರೈಕೆಯನ್ನು ಒದಗಿಸುವಲ್ಲಿ ಸಂಸ್ಥೆಯು ಫಲಪ್ರದವಾಗಿರುತ್ತದೆ.

ಸಂಸ್ಥೆಗೆ ಅವಶ್ಯಕವಾದ ಪ್ರೌಢ ಶುಶ್ರೂಷಕ ಸಿಬ್ಬಂದಿ ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಯನ್ನು ಅವರ ಅರ್ಹತೆಯನ್ನು ಮತ್ತು ಕೌಶಲ್ಯವನ್ನು ಪ್ರಾಥಮಿಕವಾಗಿ ಪರಿಶೀಲಿಸಿ, ಅವರುಗಳ ಸೇವೆಯನ್ನು ಪಡೆದು ರೋಗಿಗಳ ಆರೈಕೆಯನ್ನು ಕಾಪಾಡಲು ಸಂಸ್ಥೆಯು ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಶುಶ್ರೂಷಕರನ್ನು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಯನ್ನು ಖಾಯಂ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ನೇಮಕಾತಿ ಮಾಡಲು ಪ್ರಯತ್ನವನ್ನೂ ಸಹ ಮಾಡಲಾಗಿರುತ್ತದೆ. ಅಲ್ಲದೇ ಸಂಸ್ಥೆಗೆ ಹೆಚ್ಚುವರಿಯಾಗಿ ಬೇಕಾಗಿರುವ 200 ಶುಶ್ರೂಷಕ ಹುದ್ದೆಯನ್ನು ಸೃಜಿಸುವಂತೆ ಕೋರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ. (ಎನ್.ಬಿ)

Leave a Reply

comments

Related Articles

error: