ಕರ್ನಾಟಕ

ಬಾವಿಗೆ ಕಾಲುಜಾರಿ ಬಿದ್ದು ಬಾಲಕಿಯರ ಸಾವು

ಕಲಬುರಗಿ,ಮಾ.21: ಬಾವಿಗೆ ಬಟ್ಟೆ ಹೊಗೆಯಲು ಹೊಗಿ ಕಾಲು ಜಾರಿಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಚಿಂಚೋಳಿ ತಾಲೂಕಿನ ಮೋಗಾ ತಾಂಡಾದಲ್ಲಿ ನಡೆದಿದೆ.

ಘಟನೆಯಲ್ಲಿ ಮೋಗಾ ತಾಂಡಾ ನಿವಾಸಿಗಳಾದ ಜಯಶ್ರೀ(15) ಮತ್ತು ಲತಾ(13) ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಇಬ್ಬರು ಬಾಲಕಿಯರು ಬಟ್ಟೆ ತೊಳೆಯಲು ಬಾವಿಗೆ ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಇಬ್ಬರು ಬಾಲಕಿಯ ಬಾವಿಗೆ ಬಿದ್ದಿದ್ದಾರೆ.

ಬಟ್ಟೆ ತೊಳೆಯಲು ಹೋದ ಮಕ್ಕಳು ಸಂಜೆಯಾದರೂ ಮನೆಗೆ ಬಂದಿಲ್ಲ ಎಂದು ಬಾವಿ ಬಳಿ ಹೋದಾಗ ಇಬ್ಬರು ಕಾಣಲಿಲ್ಲ. ತಕ್ಷಣ ಪೋಷಕರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಚಿಂಚೋಳಿ ಪೊಲೀಸರು ಬಂದಿದ್ದು, ಕಾರ್ಯಚರಣೆ ನಡೆಸಿ ಬಾವಿಯಲ್ಲಿನ ಮೃತ ದೇಹಗಳನ್ನು ಹೊರತಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ.ಎಸ್ )

Leave a Reply

comments

Related Articles

error: