ಕರ್ನಾಟಕ

ಹೊಲದಲ್ಲಿ ನವಜಾತ ಗಂಡುಶಿಶು ಪತ್ತೆ!

ಹಾವೇರಿ,ಮಾ.21: ನವಜಾತ ಶಿಶುವನ್ನು ಚೀಲದಲ್ಲಿ ಹಾಕಿ, ಜಮೀನಿನ ಬಳಿ ಎಸೆದು ಹೋಗಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೆಟಗೇರಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಮಹಿಳೆಯರು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯೋರ್ವರು ಚೀಲವನ್ನ ಗಮನಿಸಿದಾಗ ಚೀಲದಲ್ಲಿ ಮಗು ಇರೋದು ಬೆಳಕಿಗೆ ಬಂದಿದೆ. ಜೀವಂತವಾಗಿರೋ ನವಜಾತ ಗಂಡು ಶಿಶುವನ್ನ ರಕ್ಷಿಸಿ ಬೆಟಗೇರಿ ಗ್ರಾಮದ ಬಳಿ ಇರೋ ಚಿಕ್ಕೇರೂರು ಗ್ರಾಮದ ಸರಕಾರಿ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ನೀಡಲಾಗುತ್ತದೆ.  ನವಜಾತ ಗಂಡು ಶಿಶುವನ್ನ ಚೀಲದಲ್ಲಿ ಎಸೆದುಹೋದ ನಿಷ್ಕರುಣಿ ಪೋಷಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.   (ವರದಿ: ಪಿ.ಎಸ್ )

Leave a Reply

comments

Related Articles

error: