ಪ್ರಮುಖ ಸುದ್ದಿಮೈಸೂರು

ವಕೀಲ ನಾರಿಮನ್ ಬದಲಿಸದಿದ್ದಲ್ಲಿ ರಾಜ್ಯದ ಕಾವೇರಿ ಕಣಿವೆ ಬರಡು : ಅರ್ಜುನಹಳ್ಳಿ ಪ್ರಸನ್ನಕುಮಾರ್

ಮೈಸೂರು, ಮಾ.21 : ಕಾವೇರಿ ಜಲ ವಿವಾದ ಕುರಿತಂತೆ ರಾಜ್ಯ ಸರ್ಕಾರ ಹಿರಿಯ ವಕೀಲ ನಾರಿಮನ್ ಅವರನ್ನು ಬದಲಿಸಿ, ಪುನರ್ ವಿಮರ್ಶೆ ಅಥಾವ ಮೇಲ್ಮನವಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದ ಇಡೀ ಕಾವೇರಿ ಕಣಿವೆ ಬರಡಾಗುವ ಸಾಧ್ಯತೆಯಿದೆ ಎಂದು ಅರ್ಜುನಹಳ್ಳಿ ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ವಿಚಾರಣೆ ಪ್ರಾರಂಭಿಸುವ ಮುನ್ನ ಮರು ಪರಿಶೀಲನೆಗೆ ಜಲ ಪಂಚಾಯಿತಿ ವರ್ಗಾಯಿಸೋಣವೇ ಎಂದು ಕೇಳಿದಾಗ ಅದನ್ನು ಒಪ್ಪದ ನಾರಿಮನ್ ನೀವೇ ತೀರ್ಪು ನೀಡಿ ಎಂದುದೇಕೆ?  ಜೊತೆಗೆ ದೊರಕಿದ್ದ ಅವಕಾಶವನ್ನು ಕೈಚೆಲ್ಲಿದ್ದೇಕೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ರಾಜ್ಯದಲ್ಲಿ ಕಬ್ಬು ಬೆಳೆಯನ್ನು 40 ಸಾವಿರ ಎಕರೆಗೂ ಮತ್ತು ಬತ್ತದ ಎರಡನೇ ಬೆಳೆಯನ್ನು ಬೆಳೆಯದಂತೆ ಪಂಚಾಯಿತಿ ನಿರ್ಬಂಧ ವಿಧಿಸಿರುವುದನ್ನು ರದ್ದು ಪಡಿಸಲು ಕೋರದಿದ್ದುದು ಆಕ್ಷೇಪಾರ್ಹವಾಗಿದೆ ಎಂದು ತಿಳಿಸಿದರು.

ಜೊತೆಗೆ, ರಾಜ್ಯದ ಏತ ನೀರಾವರಿಗೆ ನೀರು ನೀಡದಿರುವುದರಿಂದ ನಮ್ಮ ಎಲ್ಲ ಏತ ನೀರಾವರಿ ಬೆಳೆಗಳು ಸ್ಥಗಿತವಾಗಲಿದ್ದು, ಈ ನಿರ್ಬಂಧ ರದ್ದುಗೊಳಿಸಿ ಬಳಸಲು ಅವಕಾಶ ಮಾಡಿಕೊಡಿ ಎಂದು ಸಹಾ ಕೋರದಿದ್ದುದು ದೊಡ್ಡ ಪ್ರಮಾದವಾಗಿದೆ.

ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ನಾರಿಮನ್‌ರನ್ನು ಬದಲಿಸಿ, ಪುನರ್ ವಿಮರ್ಶೆ ಅಥವಾ ಮೇಲ್ಮನವಿ ಸಲ್ಲಿಸಬೇಕೆಂದು ಕೋರಿದರು.

ರಾಧಾ, ಚಂದ್ರಶೇಖರ, ವಸಂತಕುಮಾರ, ರಮೇಶ್, ಕೃಷ್ಣಪ್ಪ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: