ಸುದ್ದಿ ಸಂಕ್ಷಿಪ್ತ

ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ

ಮೈಸೂರು,ಮಾ.21 : ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಮಾ.23 ಮತ್ತು 24ರಂದು ಸ್ವರ್ಣ ಮಹೋತ್ಸವ ಭವನದ ಎಸ್ ಸಿ/ಐಎಸ್ ಸೆಮಿನಾರ್ ಸಭಾಂಗಣದಲ್ಲಿ ನಡೆಯುವುದು.

23.ರ ಬೆಳಗ್ಗೆ 9.30ಕ್ಕೆ ಬೆಂಗಳೂರಿನ ವಿಜ್ಞಾನಿ ಡಾ.ರಾಜೀವ್ ಜೈನ್ ಉದ್ಘಾಟಿಸುವರು, ವಿವಿಯ ಕುಲಪತಿ ಡಾ.ಬಿ.ಜಿ.ಸಂಗಮೇಶ್ವರ ಅಧ್ಯಕ್ಷತೆ. ಹಿರಿಯ ವಿಜ್ಞಾನಿ ಡಾ.ಅಂಜನಾ ಜೈನ್ ಆಶಯ ಭಾಷಣ. ಕುವೆಂಪು ವಿವಿಯ ಕುಲಸಚಿವ ಡಾ.ಹೆಚ್.ಎಸ್.ಬೋಜ್ಯ ನಾಯಕ್ ಇರುವರು.

ಸಂಜೆ 4.30ಕ್ಕೆ ಸಮಾರೋಪ, ಕಂಪ್ಯೂಟರ್ ಸೈನ್ ವಿಭಾಗದ ಮುಖ್ಯಸ್ಥ ಡಾ.ಡಿ.ಎಸ್.ಗುರು ಇನ್ನಿತರರು ಇರುವರು. ಕುಲಸಚಿವ ಡಾ.ಕೆ.ಎಸ್.ಲೋಕೇಶ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: